ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ ವ್ಯಕ್ತಿಗೆ ಠಾಣೆಗೆ ಬರುವಂತೆ ಶಿವಮೊಗ್ಗ ಪೊಲೀಸ್ ಸೂಚನೆ…

61
firstsuddi

ಶಿವಮೊಗ್ಗ : ನಗರದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನದಲ್ಲಿ ಭೋಪಾಲ್ ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಹಿನ್ನಲೆಯಲ್ಲಿ ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ್ದ ಉದ್ಯಮಿ ತೆಹಸೀನ್ ಪೂನಾವಾಲಾ ಅವರಿಗೆ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ನೋಟಿಸ್ ನೀಡಿದ್ದು, ಬೆಳಗ್ಗೆ 11 ಗಂಟೆಗೆ ಠಾಣೆಗೆ ಬರುವಂತೆ ಸೂಚಿಸಿದ್ದಾರೆ.

ಪ್ರಜ್ಞಾ ಸಿಂಗ್ ಹೇಳಿದ್ದೇನು? : ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳನ್ನು ತಿರುಗಾಡುವ ಆಟಂ ಬಾಂಬ್ ಮಾಡಬೇಕು. ಯಾರಾದರೂ ಅವರ ಶೀಲಕ್ಕೆ ಕೈ ಹಾಕಿದರೆ ಅಲ್ಲೇ ಉತ್ತರ ಕೊಡಬೇಕು. ಇನ್ನು ಮುಂದೆ ಯಾವುದೇ ಲವ್ ಜಿಹಾದ್, ಅತ್ಯಾಚಾರ, ಅನಾಚಾರವಾಗಲು ನಾವು ಬಿಡಬಾರದು. ಪ್ರತಿ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು. ಸ್ವಯಂ ಮತ್ತು ಆತ್ಮರಕ್ಷಣೆಗೆ ಆಯುಧಗಳನ್ನು ಇಟ್ಟುಕೊಂಡರೇ ಯಾವುದೇ ತಪ್ಪಿಲ್ಲ. ಅಗತ್ಯಬಿದ್ದರೆ ಆಯುಧಗಳಿಗೆ ಪರವಾನಿಗೆಯನ್ನು ಇಟ್ಟುಕೊಳ್ಳಿ ಎಂದು ಕರೆ ನೀಡಿದ್ದರು.

ಇದೇ ವಿಚಾರವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರು ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ. ಹಾಗಾಗಿ ಎಫ್‍ಐಆರ್ ದಾಖಲಿಸುವಂತೆ ತೆಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿದ್ದರು.