ಪ್ರಜ್ವಲ್ ದೇವರಾಜ್ ಅವರು ನಟಿಸಿರುವ “ ‘ಇನ್ಸ್​​​ಪೆಕ್ಟರ್​ ವಿಕ್ರಂ” ಚಿತ್ರದ ಟೀಸರ್ ಬಿಡುಗಡೆ…

384

ಬೆಂಗಳೂರು : ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರಜ್ವಲ್ ಅವರು ಮೊದಲ ಬಾರಿಗೆ ಇನ್ಸ್​​​ಪೆಕ್ಟರ್ ಆಗಿ ನಟಿಸಿರುವ “ಇನ್ಸ್​​​ಪೆಕ್ಟರ್​ ವಿಕ್ರಂ” ಚಿತ್ರದ ಟೀಸರನ್ನು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ನರಸಿಂಹ ಅವರು ನಿರ್ದೇಶಿಸಿದ್ದು, ವಿಖ್ಯಾತ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿ ನಟಿಯಾಗಿ ಜಾಕಿ ಭಾವನ ನಟಿಸಿದ್ದಾರೆ. ಹಾಗೂ ದರ್ಶನ್ ಅವರು ಗೆಸ್ಟ್ ರೋಲಿನಲ್ಲಿ ನಟಿಸಿದ್ದಾರೆ ಎಂದು ಸಿನಿಮಾ ಮೂಲಗಳು ತಿಳಿಸಿವೆ.