ಪ್ರೇಮ ವೈಫಲ್ಯ – ಆತ್ಮಹತ್ಯೆಗೆ ಶರಣಾದ ಯುವಕ…

94
firstsuddi

ದೊಡ್ಡಬಳ್ಳಾಪುರ : ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸೂಲುಕುಂಟೆಯಲ್ಲಿ ನಡೆದಿದೆ. ಆನಂದ್(23) ಮೃತ ದುರ್ದೈವಿ. ವಿಜಯದಶಮಿ ದಿನ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದ ಆನಂದ್  ನಿನ್ನೆ ಗ್ರಾಮದ ನೀರಿನ ಕಟ್ಟೆಯಲ್ಲಿ  ಶವವಾಗಿ ಪತ್ತೆಯಾಗಿದ್ದಾನೆ.

ಆನಂದ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಈ ವೇಳೆ ಯುವತಿ ಸಮುದಾಯಕ್ಕೆ ಸೇರಿದ್ದ ಮತ್ತೊಬ್ಬ ಯುವಕ ಆಕೆಯನ್ನು ಪ್ರೀತಿಸುತ್ತಿದ್ದನಂತೆ. ಯುವತಿ ಪೋಷಕರೂ ಅವನೊಂದಿಗೆ ಮದುವೆಗೆ ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಯುವಕ ಮನನೊಂದು ಕಟ್ಟೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.