ಫೈಟರ್ ಸಾವು ಪ್ರಕರಣ : ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ನಟಿ ರಚಿತಾ ರಾಮ್.

74
firstsuddi

ಬೆಂಗಳೂರು : ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಚಿತ್ರದ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಯ ಡಿವೈಎಸ್ ಪಿ ಮೋಹನ್ ಕುಮಾರ್ ಮುಂದೆ ಹಾಜರಗಿ ಹೇಳಿಕೆ ದಾಖಲಿಸಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಚಿತಾ ರಾಮ್, ಅವಘಡ ನಡೆದ ಸಂದರ್ಭದಲ್ಲಿ ನಾನು ಸ್ಥಳದಲ್ಲಿರಲಿಲ್ಲ. ಮೀಡಿಯಾ, ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ತಿಳಿಯಿತು. ಹಾಗಾಗಿ ಇಷ್ಟೇ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದೇನೆ. ಆ ನಟನ ಸಾವು ಹೇಗಾಯ್ತು? ಅಲ್ಲಿ ಏನಾಯ್ತು ಅಂತ ಗೊತ್ತಿಲ್ಲ. ನಾನು ಹಳೇ ಶೆಡ್ಯೂಲ್ ನಲ್ಲಿದ್ದೆ. ಆದರೆ, ಇದು ಹೊಸ ಶೆಡ್ಯೂಲ್ ಶೂಟಿಂಗ್ ನಡೆದಿದೆ. ಫೈಟಿಂಗ್ ಸೀನ್ ನಲ್ಲಿ ನಟಿಗೆ ಕೆಲಸ ಇರಲ್ಲ. ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರೂ ಎಂಬ ಮಾಹಿತಿ ಇಲ್ಲ. ಇನ್ನೂ ಅಜಯ್ ರಾವ್ ಸ್ಥಳದಲ್ಲಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ಹೇಳಿದರು.

ಇನ್ನೂ ಪ್ರಕರಣದ ಎಫ್ ಐಆರ್ ನಲ್ಲಿ ಇತರರೆಂದು ನಮೂದಿಸಿದ ಹಿನ್ನೆಲೆ ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.