ಬಜೆಟ್ 2022 – ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ…

149
firstsuddi

ನವದೆಹಲಿ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರ ತೆರಿಗೆ ಕಡಿತ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಿಸಲಾಗಿದೆ.

2022-23ನೇ ಸಾಲಿನ ಕೇಂದ್ರ ಬಜೆಟ್ ಆದಾಯ ತೆರಿಗೆ ಮತ್ತು ನೇರ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿಯೂ ಕೂಡ ಯಾವುದೇ ಬದಲಾವಣೆ ತಂದಿಲ್ಲ. ಏಪ್ರಿಲ್ 1, 2020ರಲ್ಲಿ ಜಾರಿಗೆ ಬಂದ ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರಿಸಲಾಗಿದೆ. ಆದರೆ ವಿಶೇಷ ಚೇತನ ವ್ಯಕ್ತಿಯ 60 ವರ್ಷ ವಯಸ್ಸು ಮೇಲ್ಪಟ್ಟ ಪೋಷಕರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಮೊದಲಿನಂತೆ ಎರಡೂವರೆ ಲಕ್ಷ ರೂಪಾಯಿಯವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಎರಡೂವರೆ ಲಕ್ಷದಿಂದ 5 ಲಕ್ಷ ರೂಪಾಯಿಗೆ ಶೇಕಡಾ 5ರಷ್ಟು ತೆರಿಗೆ, ಐದು ಲಕ್ಷ ರೂಪಾಯಿಯಿಂದ ಏಳೂವರೆ ಲಕ್ಷ ರೂಪಾಯಿಗೆ ಶೇಕಡಾ 10ರಷ್ಟು ತೆರಿಗೆ, ಏಳೂವರೆ ಲಕ್ಷ ರೂಪಾಯಿಯಿಂದ 10 ಲಕ್ಷದವರೆಗೆ ಶೇಕಡಾ 15ರಷ್ಟು, 10 ಲಕ್ಷ ರೂಪಾಯಿಯಿಂದ 12.50 ಲಕ್ಷದವರೆಗೆ 20ರಷ್ಟು ತೆರಿಗೆ ವಿಧಿಸಲಾಗುತ್ತದೆ. 2.50 ಲಕ್ಷದಿಂದ 15 ಲಕ್ಷದವರೆಗೆ ಶೇಕಡಾ 25ರಷ್ಟು ತೆರಿಗೆ, 15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.