ಬಸ್ ಚಲಾಯಿಸುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಸಾವು…

74
firstsuddi

ವಿಜಯಪುರ: ಬಸ್ ಚಲಾಯಿಸುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ನಗರದಲ್ಲಿ ನಡೆದಿದೆ.

ಮುರಿಗೆಪ್ಪ ಅಥಣಿ ಮೃತ ಚಾಲಕ. ಬಸ್ ಕಲಬುರಗಿಯ ಜಿ. ಅಪ್ಜಲಪುರದಿಂದ ವಿಜಯಪುರ ಕಡೆಗೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನ ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ಬಸ್ ತೆಗೆದುಕೊಂಡು ಹೊರಟಿದ್ದರು. ಆಗ ದಾರಿ ಮಧ್ಯೆ ಡ್ರೈವರ್ ಮುರಿಗೆಪ್ಪ ಅಥಣಿಗೆ ಹೃದಯಾಘಾತವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಆಗ ಪೆಟ್ರೋಲ್ ಬಂಕ್ ನುಗ್ಗುತ್ತಿದ್ದ ಬಸ್ಸಿನ ಬ್ರೇಕ್ ಹಿಡಿದು ನಿರ್ವಾಹಕ ಶರಣು ಟಾಕಳಿ ನಿಲ್ಲಿಸಿದ್ದರು. ನಿರ್ವಾಹಕ ಶರಣು ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಅಲ್ಲದೇ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭವನೀಯ ಅಪಾಯ ತಪ್ಪಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಪ್ಜಲಪುರ ಡಿಪೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.