ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಮಾಜಿ ಪತ್ನಿ ಹೆಲೆನಾ ನಿಧನ.

49

ಬಾಲಿವುಡ್ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಮಾಜಿ ಪತ್ನಿ ಹೆಲೆನಾ ಲ್ಯೂಕ್ ಅವರು ಅಮೆರಿಕದಲ್ಲಿ ಇಂದು ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕಲ್ಪನಾ ಅಯ್ಯರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿ ಹೆಲೆನಾ ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ನಟನೆಯ 1985ರ ಸೂಪರ್ ಹಿಟ್ ಸಿನಿಮಾ ‘ಮರ್ದ್’ನಲ್ಲಿನ ಪಾತ್ರಕ್ಕಾಗಿ ಹೆಲೆನಾ ಜನಪ್ರಿಯರಾಗಿದ್ದರು. ಸೂಪರ್ ಸ್ಟಾರ್ ಮಿಥುನ್ ಅವರೊಂದಿಗೆ ಕೇವಲ ನಾಲ್ಕು ತಿಂಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಕ್ಯಾಂಡಿಡ್  ಇಂಟರ್‌ವ್ಯೂವ್ ಒಂದರಲ್ಲಿ ಅವರು ತಮ್ಮ ಈ ದಾಂಪತ್ಯ ಅವಧಿಯನ್ನು “ಮಬ್ಬಾದ ಕನಸು” ಎಂದು ವಿವರಿಸಿದ್ದರು.