ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆದ್ದಿದೆ : ಜಿ. ಪರಮೇಶ್ವರ್.

63
firstsuddi

ಉಡುಪಿ : ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆದ್ದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ್ ಡಾ. ಜಿ ಪರಮೇಶ್ವರ್ ಆರೋಪಿಸಿದರು.

ಇಂದು ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಇಷ್ಟೊಂದು ಬೆಲೆ ಏರಿಕೆ ನಡುವೆಯೂ ಬಿಜೆಪಿ ಗೆದ್ದಿದೆ. ಇದು ಅಧಿಕಾರದ ದುರುಪಯೋಗದ ಗೆಲುವು ಈ ಫಲಿತಾಂಶದಿಂದ ಕಾಂಗ್ರೆಸ್ಸಿಗೆ ನಿರಾಸೆಯಾಗಿಲ್ಲ. ಮುಂದೆ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಡಿಕೆಶಿ- ಸಿದ್ದರಾಮಯ್ಯ ಚುನಾವಣೆಯ ಪ್ರಚಾರದಲ್ಲಿ ಹೆಚ್ಚು ಭಾಗವಹಿಸಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಇದು ಚರ್ಚಿಸಬೇಕಾದ ದೊಡ್ಡ ವಿಚಾರ ಅಲ್ಲ. ಇಂತಹ ಚುನಾವಣೆಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ನಡೆಯುತ್ತದೆ. ನನ್ನ ಅವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಕಾಂಗ್ರೆಸ್ ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ ಇಂತಹ ಸುದ್ದಿಯನ್ನ ಯಾರೋ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದ್ದು, ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್ ನಲ್ಲಿ ಇಲ್ಲ ಎಂದರು.

ಇಂದು ಸಂಜೆ ಏಳು ಗಂಟೆಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ಚರ್ಚೆ ಮಾಡಲಿದ್ದು, ಸರ್ಕಾರವನ್ನು ಯಾವ ರೀತಿ ಪ್ರಶ್ನೆ ಮಾಡಬೇಕು ಸರ್ಕಾರದ ವೈಫಲ್ಯಗಳನ್ನು ರಾಜ್ಯಕ್ಕೆ ಮುಟ್ಟಿಸುವ ಕಾರ್ಯತಂತ್ರ ಮಾಡುತ್ತೇವೆ. ಕೋವಿಡ್ ಚಿಕಿತ್ಸೆ ವಿಚಾರದ ಭ್ರಷ್ಟಾಚಾರವಾಗಿದ್ದು ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಇಂದಿನ ಮಾತುಕತೆ ಆಗಲಿದೆ. ರಾಜ್ಯದಲ್ಲಿ ಯೋಜನೆಗಳು ಸಂಪೂರ್ಣ ಸ್ಥಗಿತ ಆಗಿದ್ದು ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದರು.