ಬೆಳ್ತಂಗಡಿಯ ಯುವಕನಿಗೆ ಕೊರೋನಾ ಸೋಂಕು ದೃಢ…

157
firstsuddi

ಮಂಗಳೂರು: ವಿದೇಶದಿಂದ ಆಗಮಿಸಿದ್ದ ಬೆಳ್ತಂಗಡಿ ತಾಲೂಕಿನ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ದುಬೈಯಲ್ಲಿದ್ದ ಈತ ಮಾರ್ಚ್ 21ರಂದು ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ತಲುಪದ್ದಿ ಅಲ್ಲಿಂದ ಕೆ ಎಸ್ ಆರ್ ಟಿ ಬಸ್ ಮೂಲಕ ಊರಿಗೆ ಬಂದಿದ್ದ. ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಈತನನ್ನು ಮಾರ್ಚ್ 24ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಯಲ್ಲಿ ಕೊರೋನಾ ಸೋಂಕ ತಗುಲಿರುವುದು ದೃಢಗೊಂಡಿದೆ.