ಬೈಕ್‍ಗೆ ಲಾರಿ ಡಿಕ್ಕಿ- ಮಹಿಳೆ ಸಾವು, ಎಎಸ್‍ಪಿ ಗನ್‍ಮ್ಯಾನ್ ಗಂಭೀರ…

51
firstsuddi

ಚಿಕ್ಕಮಗಳೂರು: ಲಾರಿ ಚಾಲಕ ಒನ್ ವೇನಲ್ಲಿ ಬಂದ ಪರಿಣಾಮ ಬೈಕ್‍ಗೆ ಡಿಕ್ಕಿಯಾಗಿ, ಮಹಿಳೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ. ಘಟನೆಯಲ್ಲಿ ಮಹಿಳೆಯ ಪತಿ ದಾವಣಗೆರೆ ಎಎಸ್‍ಪಿ ಗನ್‍ಮ್ಯಾನ್ ಜಯಣ್ಣ ಸ್ಥಿತಿ ಗಂಭೀರವಾಗಿದೆ.

ಸುಮಾ (25) ಮೃತ ದುರ್ದೈವಿ. ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ, ಪತ್ನಿ ಜೊತೆ ಬೈಕಿನಲ್ಲಿ ಹೋಗುವಾಗ ಈ ಅಪಘಾತ ನಡೆದಿದೆ. ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಜಯಣ್ಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.