ಭಾರತಕ್ಕೆ 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ!

150
firstsuddi

ವಾಷಿಂಗ್ಟನ್ : ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಮೂರು ಲಕ್ಷ ಕೇಸ್ಗಳು ವರದಿಯಾಗುತ್ತಿವೆ. ದೇಶಾದ್ಯಂತ ಚಿಕಿತ್ಸೆಗಾಗಿ ಸೋಂಕಿತರು ಪರದಾಡುತ್ತಿದ್ದು, ಸಾಕಷ್ಟು ರೋಗಿಗಳು ಆಕ್ಸಿಜನ್, ಅಗತ್ಯ ಸೌಲಭ್ಯಗಳಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿನ ಪರಿಸ್ಥಿತಿ ಕಂಡು ಗೂಗಲ್ 135 ಕೋಟಿ ರೂ. ನೆರವು ಘೋಷಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ನ ಪರಿಸ್ಥಿತಿ ನೋಡಿ ನೋಡಿ ನಾನು ಕುಸಿದಿದ್ದು, ದೇಶದಲ್ಲಿ ವೈದ್ಯಕೀಯ ಸರಬರಾಜು ಮತ್ತು ತುರ್ತು ಪರಿಸ್ಥಿತಿಯ ಬೆಂಬಲಕ್ಕಾಗಿ ‘ಯೂನಿಸೆಫ್’  ಹಾಗೂ ‘ಗಿವ್ ಇಂಡಿಯಾ’ ಅಭಿಯಾನದಡಿ 135 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಜಾಗತಿಕ ಕೋವಿಡ್-19 ನಿರ್ಮೂಲನೆಗಾಗಿ ಸುಂದರ್ ಪಿಚೈ ಅವರು 5,990 ಕೋಟಿ ರೂ. ದೇಣಿಗೆ ನೀಡಿದ್ದರು.