ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ನಟಿ ಸ್ವರಾ ಭಾಸ್ಕರ್.

67
firstsuddi

ಭೋಪಾಲ್ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.

ಇಂದು ಪ್ರಸಿದ್ಧ ನಟಿ ಸ್ವರಾ ಭಾಸ್ಕರ್ ಅವರು ಭಾರತ್ ಜೋಡೋ ಯಾತ್ರೆಯ ಭಾಗವಾದರು. ಸಮಾಜದ ಪ್ರತಿಯೊಂದು ವರ್ಗದ ಉಪಸ್ಥಿತಿಯು ಈ ಯಾತ್ರೆಯನ್ನು ಯಶಸ್ವಿಗೊಳಿಸಿದೆ ಕಾಂಗ್ರೆಸ್ ಟ್ವೀಟ್ ನಲ್ಲಿ ಬರೆದುಕೊಂಡಿದೆ.

ಒಂದು ದಿನದ ವಿರಾಮದ ನಂತರ ಇಂದು ಬೆಳಗ್ಗೆ ಉಜ್ಜಯಿನಿಯಿಂದ ಯಾತ್ರೆ ಪುನರಾರಂಭವಾಗಿದ್ದು, ಮಧ್ಯಪ್ರದೇಶದ ಅಗರ್ ಮಾಲ್ವಾಕ್ಕೆ ತೆರಳಿತು.

150 ದಿನಗಳ ಭಾರತ್ ಜೋಡೊ ಯಾತ್ರೆಯ 83ನೇ ದಿನವಾದ ಇಂದು ಕೂಡ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜೊತೆ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು.