ಭಾರೀ ಮಳೆಗೆ ಹಾರಿ ಹೋದ ಮನೆ ಛಾವಣಿ ; ಜೋಳಿಗೆಯಲ್ಲಿ ಮಲಗಿದ್ದ ಮಗು ಸಾವು…

139
firstsuddi

ವಿಜಯಪುರ : ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಛಾವಣಿ ಹಾರಿ ಹೋಗಿದೆ. ಪರಿಣಾಮ ಜೋಳಿಗೆಯಲ್ಲಿ ಮಲಗಿದ್ದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿರುವ 8 ತಿಂಗಳ ಪುಟ್ಟ ಕಂದಮ್ಮ ಅಬ್ದುಲ್ ರೆಹೆಮಾನ್ ಎಂಬವರದ್ದಾಗಿದೆ.

ಬಿರುಗಾಳಿ ರಭಸಕ್ಕೆ ಮನೆಯ ಛಾವಣಿ ಹಾರಿ ಹೋಗಿದ್ದು, ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ವಿದ್ಯುತ್ ಕಂಬಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ ಎಂಬ ಮಾಹಿತಿ ತಿಳಿದುಬಂದಿದೆ.