ಮಂಗಳೂರು : ಇಂದು ಮಧ್ಯಾಹ್ನ 3ರಿಂದ ಸಂಜೆ 6ಗಂಟೆ ವರೆಗೆ ಕರ್ಫ್ಯೂ ಸಡಿಲಿಕೆ : ಬಿ.ಎಸ್. ಯಡಿಯೂರಪ್ಪ.

170
firstsuddi

ಮಂಗಳೂರು : ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ನಗರದ ಕೇಂದ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದ್ದ ಕರ್ಫ್ಯೂವನ್ನು ಇಂದು ಮಧ್ಯಾಹ್ನ 3ರಿಂದ ಸಂಜೆ 6ಗಂಟೆ ವರೆಗೆ ಸಡಿಲಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಗರದ ಸರ್ಕೀಟ್ ಹೌಸ್‍ನಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮನವಿಯ ಮೇರೆಗೆ ಇಂದು ಮೂರು ಗಂಟೆಗಳ ಕಾಲ ಕರ್ಫ್ಯೂ ತೆರವು ಗೊಳಿಸಲಾಗುತ್ತದೆ. ಭಾನುವಾರ ರಾತ್ರಿ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದ್ದು, ಸೋಮವಾರ ಸಂಪೂರ್ಣ ಕರ್ಫ್ಯೂ ತೆರವುಗೊಳಿಸಲಾಗುವುದು. ಆದರೆ ಸೋಮವಾರ ಕರ್ಫ್ಯೂ ತೆರವು ಮಾಡಿದ್ದರೂ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಆದರೆ ಕ್ರಿಸ್‍ಮಸ್ ಸೇರಿದಂತೆ ಯಾವುದೇ ಆಚರಣೆಗಳಿಗೆ ಅಡ್ಡಿಯುಂಟಾಗುವುದಿಲ್ಲ ಎಂದರು.