ಮಂಗಳೂರು : ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು 15 ಲಕ್ಷ ರೂ. ದರೋಡೆ…

233

ಮಂಗಳೂರು : ಸೌತ್ ಇಂಡಿಯಾ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು ಕಾರಿನೊಳಗಿದ್ದ 15 ಲಕ್ಷ ರೂ. ದರೋಡೆಗೈದ ಘಟನೆ ನಗರದ ಚಿಲಂಬಿಯಲ್ಲಿ ಇಂದು  ಮಧ್ಯಾಹ್ನ ನಡೆದಿದೆ.

ಹಣದ ವಾರಸುದಾರರು ಕಾರನ್ನು ಚಿಲಿಂಬಿಯಲ್ಲಿ ಪಾರ್ಕ್ ಮಾಡಿ ಡೋರ್ ಲಾಕ್ ಮಾಡಿ ಸೌತ್ ಇಂಡಿಯಾ ಬ್ಯಾಂಕಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಕಾರಿನ ಹಿಂಬದಿ ಸೀಟಿನ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ 15 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದರೆನ್ನಲಾಗಿದೆ.ಘಟನಾ ಸ್ಥಳಕ್ಕೆ  ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.