ಮಂಡ್ಯ :ಗಂಡನ ಅಂತ್ಯ ಸಂಸ್ಕಾರ ಮುಗಿಸಿ ಬಂದು ಪತ್ನಿಯೂ ನೇಣಿಗೆ ಶರಣು.

274

ಮಂಡ್ಯ.ಮೇ.22: ಗಂಡನ ಸಾವಿನಿಂದ ಮನನೊಂದು ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬಂದು ಮನೆಯಲ್ಲಿ ಪತ್ನಿಯೂ ಆತ್ಮಹತ್ಯಗೆ ಶರಣಾಗಿರೋ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ ನಡೆದಿದೆ. ಕಳೆದ 10 ತಿಂಗಳ ಹಿಂದಷ್ಟೆ ಕಿರಣ್ ಹಾಗೂ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಿರಣ್ ಸಾವಿಗೀಡಾಗಿದ್ದರಿಂದ ಮನನೊಂದು ಪತ್ನಿ ಪೂಜಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಿರಣ್‍ನನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕಳೆದ ರಾತ್ರಿ ಮೃತರಾಗಿದ್ದರು. ಮೃತದೇಹವನ್ನ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿಗೆ ತಂದು ಕೋವಿಡ್ ನಿಯಮಾವಳಿಯಂತೆ ತಾಲೂಕು ಆಡಳಿತದ ಮುಂದಾಳತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಆದರೆ, ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಪತ್ನಿ ಪೂಜೆ ಪತಿಯ ಸಾವಿನಿಂದ ತೀವ್ರವಾಗಿ ಮನನೊಂದಿದ್ದಳು. ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಪೂಜಾ ನೇಣು ಬಿಗಿದುಕೊಂಡು ತಾನೂ ಕೂಡ ನೇಣಿಗೆ ಶರಣಾಗಿದ್ದಾಳೆ. ಕಳೆದ ಹತ್ತು ತಿಂಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿಯ ಮೃತದೇಹವನ್ನ ಒಂದೇ ದಿನ ಮನೆಯಲ್ಲಿ ಕಂಡ ಕುಟುಂಬಸ್ಥರ ಆಕ್ರಂದರ ಮುಗಿಲು ಮುಟ್ಟಿದೆ.