ಮಠಗಳು ಅನುದಾನ ಪಡೆಯೋಕೆ 30% ಕಮಿಷನ್ ಕೊಡಬೇಕು : ದಿಂಗಾಲೇಶ್ವರ ಸ್ವಾಮೀಜಿ.

60
firstsuddi

ಬಾಗಲಕೋಟೆ : ಮಠ-ಮಾನ್ಯಗಳು ಅನುದಾನ ಪಡೆಯೋಕೆ 30% ಕಮಿಷನ್ ಕೊಡಬೇಕು. ಅನುದಾನದಲ್ಲಿ ಅಧಿಕಾರಿಗಳು ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಶಿರಹಟ್ಟಿ ಶ್ರೀ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಬಾಡಗಂಡಿ ಗ್ರಾಮದಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಲ್ಲವಾದಲ್ಲಿ ಹಣವೇ ಬಿಡುಗಡೆ ಆಗಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಐಸ್ಕ್ರೀಂ ಬಿಡುಗಡೆಯಾದರೆ ಅದು ತಲುಪುವಾಗ ಕೇವಲ ಕಡ್ಡಿ ಉಳಿದಿರುತ್ತದೆ ಎಂದು ವ್ಯಂಗ್ಯವಾಡಿದರು.