ಮದುವೆಗೂ ಮುನ್ನ ಮಗುವಿನ ನಿರೀಕ್ಷೆಯಲ್ಲಿ ಇಲಿಯಾನಾ.

57
firstsuddi

ಬಾಲಿವುಡ್ ನಟಿ ಇಲಿಯಾನಾ ‘ನಾನು ಮಗುವಿನ ನಿರೀಕ್ಷೆಯಲ್ಲಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಅವರ ಪಾರ್ಟ್ನರ್ ಯಾರು ಎಂಬುದನ್ನು ಬಹಿರಂಗ ಮಾಡಿಲ್ಲ. ಹಾಗಾಗಿ ಅವರ ಈ ನಿರ್ಧಾರದಿಂದ ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ.

ನಾನು ಮಗುವಿನ ನಿರೀಕ್ಷೆಯಲ್ಲಿರುವೆ ಎಂದು ಹಾಕಲಾದ ಪೋಸ್ಟ್ ಗೆ ಇಲಿಯಾನಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು. ನಾನು ಮೊಮ್ಮಗುವಿನ ನಿರೀಕ್ಷೆಯಲ್ಲಿರುವೆ. ಕಾಯುವುದಕ್ಕೆ ಆಗುತ್ತಿಲ್ಲ, ಬೇಗ ಮೊಮ್ಮಗು ಮನೆಗೆ ಬರಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ನಿಜವಾಗಿಯೂ ಇಲಿಯಾನಾ ತಾಯಿ ಆಗುತ್ತಿದ್ದಾರಾ? ಹಾಗಾದರೆ, ಆ ಮಗುವಿನ ತಂದೆ ಯಾರಿರಬಹುದು ಎನ್ನುವ ಅನುಮಾನ ಮೂಡಿದೆ.

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ  ‘ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಇಲಿಯಾನಾ ಡಿಕ್ರೂಜ್ ಅವರು ಬರೆದುಕೊಂಡಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎಂದು ಬರೆದಿರುವ ಪೆಂಡೆಂಟ್ ಇದೆ. ಆ ಟೀ ಶರ್ಟ್ ನಲ್ಲಿ ‘ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್’ ಎನ್ನುವ ಬರಹವಿದೆ.

ನಿಮಗೆ ಮದುವೆ ಆಗಿದೆಯೇ? ಹಾಗಿದ್ದರೆ ಮಗುವಿನ ತಂದೆ ಯಾರು’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ಪ್ರಶ್ನೆಗೆ ಅವರು ಯಾವಾಗ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.