ಉಡುಪಿ : ಮದ್ಯದ ಅಮಲಿನಲ್ಲಿ ಬ್ಲೇಡಿನಿಂದ ಕೊಯ್ದುಕೊಂಡು ಮಹಿಳೆ ಮೃತಪಟ್ಟಿರುವ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟಕಲ್ ಅರಸಿಕಟ್ಟೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಬಂಟಕಲ್ಲು ಅರಸಿಕಟ್ಟೆ ನಿವಾಸಿ ರಮೇಶ್ ಅವರ ಪತ್ನಿ ಪ್ರೇಮಾ (38) ಎಂದು ಗುರುತಿಸಲಾಗಿದೆ.
ಮೃತ ಪ್ರೇಮಾ ಅವರು ಅಕ್ಟೋಬರ್ 25ರಂದು ವಿಪರೀತ ಕುಡಿದು ಮನೆಯಲ್ಲಿ ಗಲಾಟೆ ಮಾಡಿ ಮನೆಯಲ್ಲಿ ಮಲಗಿದ್ದರು. ಬಳಿಕ ರಾತ್ರಿ ಪತಿ ರಮೇಶ್ ಅವರು ಊಟ ಮಾಡಿ ಮಲಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಮನೆಯ ಕೋಣೆಯ ಬಾಗಿಲನ್ನು ಹಾಕಿದ್ದು, ಬಳಿಕ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾರವರು ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೊಯ್ದಕೊಂಡಿದ್ದು, ಬಳಿಕ ಮನೆಯವರು ಕೂಡಲೇ ಚಿಕಿತ್ಸೆಗಾಗಿ ಪ್ರೇಮಾರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










