ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಸಜ್ಜಾದ ಹಿಂದೂಪರ ಸಂಘಟನೆಗಳು…

60
firstsuddi

ಬೆಂಗಳೂರು : ರಾಜ್ಯದಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಜೋರಾಗಿದೆ. ಈ ನಡುವೆ ರಾಜ್ಯದಲ್ಲಿ ಇನ್ನೊಂದು ಹೊಸ ಅಭಿಯಾನ ಶುರು ಮಾಡಲು ಹಿಂದೂಪರ ಸಂಘಟನೆಗಳು ಸಿದ್ಧತೆ ನಡೆಸುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಿ ಮಸೀದಿ ಸೌಂಡ್ ಬ್ಯಾನ್ ಮಾಡಲು ಮುಂದಾಗಿದ್ದು, ಈ ಕುರಿತಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಹಿಂದೂ ಪರ ಸಂಘಟನೆ ತಯಾರಿ ನಡೆಸಿದೆ.

ಶನಿವಾರ ಶಿವಾಜಿ ಪಾರ್ಕ್ ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್)ಮುಖ್ಯಸ್ಥ ರಾಜ್ ಠಾಕ್ರೆಯವರು, ನಾನು ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಅಷ್ಟೆಲ್ಲ ದೊಡ್ಡದಾಗಿ ಯಾಕೆ ಇರಬೇಕು? ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ತೆಗೆಯದೆ ಇದ್ದರೆ, ನಾವು ಮಸೀದಿಯ ಹೊರಗೆ ಧ್ವನಿ ವರ್ಧಕ ಹಾಕಿ ಹನುಮಾನ್ ಚಾಲೀಸ್ ಶ್ಲೋಕ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಿನ್ನೆ ಮುಂಬೈನ ಘಾಟ್ ಕೋಪರ್ ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ.