ಮಾವಿನಹಣ್ಣು ಮಾರ್ಕೆಟ್ ಹಿಂದೂಗಳ ಪಾಲಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ ಆರಂಭ…

106
firstsuddi

ಹಾಸನ : ರಾಜ್ಯದಲ್ಲಿ ಹಿಜಾಬ್ ವಿವಾದ, ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್-ಜಟ್ಕಾ ಕಟ್ ವಿವಾದ, ಆಜಾನ್ ವಿವಾದದ ಬಳಿಕ ಇದೀಗ ಮತ್ತೊಂದು ಅಭಿಯಾನ ಆರಂಭವಾಗಿದೆ.

ಮಾವಿನಹಣ್ಣಿನ ಸೀಜನ್ ಆರಂಭವಾಗುತ್ತಿರುವ ಹಿನ್ನೆಲೆ ಮಾವಿನಹಣ್ಣಿನ ಮಾರ್ಕೆಟ್ ಹಿಂದೂಗಳದ್ದಾಗಬೇಕು ಎಂದು ಜಿಲ್ಲೆಯಲ್ಲಿ ವಾಟ್ಸಾಪ್ ಅಭಿಯಾನ ಶುರು ಮಾಡಲಾಗಿದೆ. ಮಾವಿನಹಣ್ಣು ಹೋಲ್ ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂಬ ಪೋಸ್ಟರ್ ಗಳನ್ನು ವಾಟ್ಸಪ್ ನಲ್ಲಿ ಶೇರ್ ಮಾಡುವ ಮೂಲಕ ಹಿಂದೂ ಯುವಕರೇ ಮುಂದೆ ಬನ್ನಿ ಎಂಬ ಕರೆ ನೀಡಿ ಹಿಂದು ಕಾರ್ಯಕರ್ತರು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಗಳು ವೈರಲ್ ಆಗುತ್ತಿವೆ.