ಮುಸ್ಲಿಂ ಆಧ್ಯಾತ್ಮಿಕ ನಾಯಕನ ಗುಂಡಿಕ್ಕಿ ಹತ್ಯೆ.

79
firstsuddi

ಮುಂಬೈ : ಮಹಾರಾಷ್ಟ್ರದ ನಾಸಿಕ್ ನಲ್ಲಿ ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ನಿನ್ನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಸೂಫಿ ಬಾಬಾ ಎಂದೇ ಹೆಸರು ಪಡೆದಿದ್ದ ಖ್ವಾಜಾ ಸಯ್ಯದ್ ಚಿಶ್ತಿ ಅವರನ್ನು ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿ ಇಂಡಸ್ಟ್ರಿಯಲ್ ಝೋನ್ ನಲ್ಲಿ ಹಣೆಗೆ ಗುಂಡು ಹಾರಿಸಿ ಕೊಲ್ಲಲಾಗಿದೆ.

ಈ ದುಷ್ಕೃತ್ಯ ಎಸಗಿದ ಬಳಿಕ ಘಟನಾ ಸ್ಥಳದ ಹತ್ತಿರದಲ್ಲೇ ನಿಲ್ಲಿಸಿದ್ದ ಎಸ್ ಯುವಿಯಲ್ಲಿ ಹಂತಕರು ಪರಾರಿಯಾಗಿದ್ದಾರೆ. ಆಸ್ತಿಯ ವಿಷಯವಾಗಿ ಈ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಹಂತಕರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.