ಮೂಡಿಗೆರೆ : ಆತಂಕದ ದಿನಗಳಲ್ಲಿ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ಕೊರೊನಾ ಸೇನಾನಿಗಳ ಕಾರ್ಯ ಶ್ಲಾಘನೀಯ : ರವಿ ವಾಟೆಖಾನ್.

124
firstsuddi

ಬಣಕಲ್: ಕೊರೊನಾ ಆತಂಕದ ದಿನಗಳಲ್ಲಿ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ಕೊರೊನಾ ಸೇನಾನಿಗಳ ಕಾರ್ಯ ಶ್ಲಾಘನೀಯ ಎಂದು ಬಣಕಲ್ ಜೇಸಿಐ ವಿಸ್ಮಯದ ಅಧ್ಯಕ್ಷ ರವಿ ವಾಟೆಖಾನ್ ಹೇಳಿದರು.
ಬಣಕಲ್ ಜೇಸಿಐ ವಿಸ್ಮಯದ ವತಿಯಿಂದ ಬಣಕಲ್ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಯಾಂಡ್ ಹಾಗೂ ಮಾಸ್ಕ್‍ನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಕೊರೊನಾ ಸೋಂಕು ವಿಶ್ವದೆಲ್ಲೆಡೆ ಆತಂಕ ಮೂಡಿಸಿದ್ದು ವೈದ್ಯರು, ಪೋಲಿಸರು, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಪರ್ತಕರ್ತರು ಸೇರಿದಂತೆ ಕೊರೊನಾ ಸೇನಾನಿಗಳ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಟಿ.ಎಂ ಗಜೇಂದ್ರ ಮಾತನಾಡಿ ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿರುವ ಪೊಲೀಸರ ಸುರಕ್ಷತೆಯ ದೃಷ್ಟಿಯಿಂದ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಕೊರೊನಾ ಸೋಂಕು ತಡೆಯಲು ಬಣಕಲ್ ಠಾಣೆಗೆ ಉಚಿತ ಸ್ಯಾನಿಟೈಸರ್ ಸ್ಟ್ಯಾಂಡ್ ಹಾಗೂ ಮಾಸ್ಕ್ ನೀಡಲಾಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಎನ್.ಟಿ ದಿನೇಶ್ ಮಾತನಾಡಿ ಸಾಆಮಾಜಿಕ ಅಂತ ಕಾಪಾಡಿಕೊಳ್ಳುವ ಮೂಲಕ ಮತ್ತು ಮಾಸ್ಕ್ ಧರಿಸುವ ಮೂಲಕ ಕೊರೊನಾ ಹರಡದಂತೆ ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಬಣಕಲ್ ಠಾಣೆ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಜೇಸಿಐ ಪಧಾಧಿಕಾರಿಗಳಾದ ರವಿಶಂಖರ್, ಕವೀಶ್, ಹರ್ಷ, ಸುರೇಂದ್ರ, ಪ್ರಮೋದ್, ಶರತ್, ಅಶ್ವಿನಿ ಮುಂತಾದವರು ಇದ್ದರು.