ಮೂಡಿಗೆರೆ : ಮೊಬೈಲ್ ಸೇವೆಗಾಗಿ ಕುದುರೆಮುಖ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನರ ಹಲವಾರು ವರ್ಷಗಳ ಬೇಡಿಕೆಯಂತೆ ಜಿಯೋ ಮೊಬೈಲ್ ಟವರ್ ಕಾರ್ಯರಂಭಗೊಂಡಿದೆ.
ಸಂಸೆ ಗ್ರಾಮ ಪಂಚಾಯಿತಿಯ ಕುದುರೆಮುಖ, ನೆಲ್ಲಿಬೀಡು,ಜಾಂಬಳೆ, ಕೆಂಗನಕೊಂಡ ಮುಂತಾದ ಗ್ರಾವiಗಳ ಜನರು ಮೊಬೈಲ್ ಸೇವೆಯಿಂದ ವಂಚಿತಗೊಂಡಿದ್ದರು. ಇಲ್ಲಿ ಬಿಎಸ್ ಎನ್ ಎಲ್ ಟವರ್ ಇದ್ದರೂ ಕೂಡ ಅದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಇದ್ದ ಕಾರಣ ಅನಿವಾರ್ಯವಾಗಿ ಖಾಸಗಿ ಸೇವೆಗಾಗಿ ಊರಿನ ಜನ ಮೊರೆಹೋಗಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಇಲ್ಲಿ ಜಿಯೋ ಟವರ್ ನಿರ್ಮಾಣವಾಗಿದ್ದರೂ ಕೂಡ ಅರಣ್ಯ ಇಲಾಖೆ ನಿಯಾಮವಳಿಯಿಂದ ಈ ಟವರ್ ಕಾರ್ಯನಿರ್ವಸಿರಲಿಲ್ಲ. ಇದರಿಂದ ಮಕ್ಕಳು ಆನ್ ಲೈನ್ ಕ್ಲಾಸ್ ನಿಂದ ವಂಚಿತಗೊಂಡಿದ್ದರು. ಅನಿವಾರ್ಯವಾಗಿ ಮಕ್ಕಳು ಅನ್ ಲೈನ್ ಗಾಗಿ ಬೇರೆ ಬೇರೆ ಗ್ರಾಮಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಅಲ್ಲದೆ ಗ್ರಾಮಸ್ಥರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಸ್ಥಳಿಯರು,ರಾಜಕೀಯ ಮುಖಂಡರುಗಳು ಸತತವಾಗಿ ಅರಣ್ಯ ಇಲಾಖೆ ಮೇಲೆ ವನ್ಯ ಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಜಿಯೋ ಸಂಸ್ಥೆಯ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರಿ ಮನವೊಲಿಸಿದ ಪರಿಣಾಮ ನಾಲ್ಕು ತಿಂಗಳ ಹಿಂದೆ ಟವರ್‍ಗೆ ಸಂಪರ್ಕ ನೀಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು.
ಗ್ರಾಮಸ್ಥರ ಸತತ ಪ್ರಯತ್ನದಿಂದ ಟವರ್ ಕಾರ್ಯರಂಭ ಮಾಡಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ತೇಜಸ್ಸ್ ಜೈನ್, ಶಂಕರೇಗೌಡ, ರಾಮಪ್ರಕಾಶ್ ಭಟ್, ಸುರೇಶ್, ಶ್ರೀಪಾಲಯ್ಯ, ರಾಜೇಂದ್ರ, ಮನೋಜ್, ಚೇತನ್, ಅಶ್ವತ್ಥ, ಸತೀಶ್ ಇದ್ದರು.










