ಮೂಡಿಗೆರೆ : ಗೋಣಿಬೀಡಿನ ಶ್ರೀ ಹನುಮಂತ ದೇವಾಲಯದಲ್ಲಿ ಧನುರ್ಮಾಸ ವಿಶೇಷ ಪೂಜೆ…

638
firstsuddi

ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡಿನ ಶ್ರೀ ಹನುಮಂತ ದೇವಸ್ಥಾನದಲ್ಲಿ ಧನುರ್ಮಾಸದ ಬೆಳಗಿನ ವಿಶೇಷ ಪೂಜೆ ವಿಜೃಂಭಣೆಯಿಂದ ನಡೆಯಿತು.  ಒಂದು ತಿಂಗಳ ಕಾಲ ನಡೆದ ಧನುರ್ಮಾಸ ಕೊನೆಯ ದಿನವಾದ ಇಂದು ಶ್ರೀ ಹನುಮಂತ ದೇವರಿಗೆ ಭಕ್ತರಾದ ಗೋಣೀಬೀಡಿನ ಇಟ್ಟಿಗೆ ರಘು ಅವರು ಬೆಣ್ಣೆ ಅಲಂಕಾರ ಸೇವೆ ಮಾಡಿಸಿದ್ದರು. ಅರ್ಚಕರಾದ ಜನಾರ್ದನ್ ಭಟ್ ಅವರು ಅಲಂಕಾರ ಮಾಡಿದರು. ಗೋಣಿಬೀಡು ಸುತ್ತಮುತ್ತಲಾ ಭಕ್ತಾಧಿಗಳು ಬಂದು ಹಣ್ಣು ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು.