ಕಳಸ : ಜಾತಿ ಧರ್ಮದ ಬೇದ ಬಿಟ್ಟು ಮಾನವ ಧರ್ಮಗಳನ್ನು ಬೆಳೆಸಿಕೊಳ್ಳಬೇಕು ಎಂದು ಮೂಡಬಿದ್ರೆ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮಿಜಿ ಹೇಳಿದರು.
ಕಳಸ ತಾಲ್ಲೂಕಿನ ಬಾಳೆಹೊಳೆ ಕಗ್ಗನಳ್ಳ ಶ್ರೀ ಸತ್ಯ ಸಾರಮಾನಿ ಕ್ಷೇತ್ರದ ನೂತನ ನಿರ್ಮಾಣದ ದೈವಾಲಯದಲ್ಲಿ ಧರ್ಮದೈವ ಅಲೇರಪಂಜುರ್ಲಿ,ಸತ್ಯಸಾರಮಾನಿ ದೈವಗಳ ಹಾಗೂ ಪರಿವಾರ ದೈವಗಳ ಬಿಂಬ ಪ್ರತಿಷ್ಟೆ ಮತ್ತು ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ನಾವೇಲ್ಲರೂ ಒಂದೇ ಎಂಬ ಸಾಮರಸ್ಯದ ಜೀವನ ನಮ್ಮದಾಗಬೇಕು.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮೂಡ ನಂಬಿಕೆಗಳಿಗೆ ಜನ ಬಲಿಯಾಗುತ್ತಿದ್ದಾರೆ.ಮೂಡ ನಂಬಿಕೆಯಿಂದ ದೂರವಾಗಿ ಮನುಷ್ಯತ್ವದ ಕಡೆಗೆ ಮುಖ ಮಾಡಬೇಕು.ಇಲ್ಲಿಯ ಮುಗ್ದ ಜನರ ಮೇಲಿನ ಪ್ರೀತಿ ನನ್ನಲ್ಲಿ ಕುಷಿ ಕೊಟ್ಟಿದೆ.ದೇವರು ಕೂಡ ಹೆಚ್ಚಾಗಿ ಮುಗ್ದರಿಗೆ ಒಲಿಯುತ್ತಾನೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ ಎಲ್ಲಿ ದೇವಸ್ಥಾನ,ದೈವಸ್ಥಾನಗಳು ಅಭಿವೃದ್ಧಿ ಹೊಂದುತ್ತವೆಯು ಅಲ್ಲಿಯ ಪರಿಸರವೂ ಅಭಿವೃದ್ಧಿಗೊಳ್ಳುತ್ತದೆ.ಅಲ್ಲದೆ ಜನರಲ್ಲಿ ಭಕ್ತಿ ಪೂರ್ವಕ ಭಾವನೆಗಳು ಹೆಚ್ಚಾಗುತ್ತದೆ.ಜನರಲ್ಲಿ ದ್ವೇಷ,ಆಸೂಯೆ,ಮಧ,ಮತ್ಸರಗಳು ದೂರವಾಗಿ ಭಕ್ತಿ ಪೂರ್ವಕ ಭಾವನೆಗಳು ಹೆಚ್ಚಾದಗ ಆ ಊರಿನಲ್ಲಿ ಸಾಮರಸ್ಯರದ ಬದುಕು ನೆಲೆಗೊಳ್ಳುತ್ತದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಪುಣ್ಯಾಹ ಗಣ ಯಾಗ,ಪ್ರತಿಷ್ಠಾ ನಿಧಿ,ಕಳಶಾಭಿಷೇಕ,ಪಂಜುರ್ಲಿ ದೈವದ ಪಾತ್ರಿ ದರ್ಶನ,ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.
ಸಭಾ ಕಾರ್ಯಕ್ರಮದ ನಂತರದಲ್ಲಿ ಕಾನದ-ಕಟದ ದರ್ಶನ ಪಾತ್ರಿಗೆ ಎಣ್ಣೆ ವೀಲ್ಯ ನೀಡುವುದು, ಧರ್ಮದೈವ ಅಲೇರ ಪಂಜುರ್ಲಿ ದೈವ ಪಾತ್ರಿಗೆ ಪಡಿಅರಿ-ಎಣ್ಣೆ ವೀಲ್ಯ ನೀಡುವುದು.ಸತ್ಯಸಾರಮಾನಿ ದೈವಗಳ ಪಾತ್ರಿ ದರ್ಶನ ಸೇವೆ, ಧರ್ಮದೈವ ಅಲೇರಪಂಜುರ್ಲಿ ಚಾಮುಂಡಿ ಗುಳಿಗ ದೈವದ ಗಗ್ಗರ ಸೇವೆ, ಕ್ಷೇತ್ರಪಾಲ ಗುಳಿಗ ಹಾಗೂ ರಾಹು ದೈವದ ಗಗ್ಗರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಸತ್ಯಸಾರಮಾನಿ ದೈವಸ್ಥಾನ ಸಮಿತಿಯ ಅಧ್ಯಕ್ಷ ಮಹಾಬಲ,ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೇಂದ್ರ ಹಿತ್ಲುಮಕ್ಕಿ,ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಸಿ.ಕೆ.ಮೂರ್ತಿ,ಬ್ರಹ್ಮ ಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬಿ.ವಿ.ರವಿ ರೈ,ಬದ್ರಿಯಾ ಜುಮ್ಮಾಮಸೀದಿ ಬಾಳೆಹೊಳೆ ಧರ್ಮಗುರು ಎಂ.ಪಿ.ಹಸನ್ ಮುಅಲ್ಲಿಮ್,ಮುಖಂಡರಾದ ಶಿವಾನಂದ್ ಬಲ್ಲಾಲ್ ಭಾಗ್,ಶೇಖರ ಕುಕ್ಕೇಡಿ,ಶ್ರೀನಿವಾಸ್ ಎಂ.ಎಸ್.ಮಿಜಾರ್,ಸುಧಾಕರ್ ಕಡೆಕುಡಿಗೆ,ನಾಗೇಶ್,ನಾಗಭೂಷನ್,ಮಂಜಪ್ಪ ಪೂಜಾರಿ ಇತರರು ಇದ್ದರು.










