ಮೂಡಿಗೆರೆ : ಜೆಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನದ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ದಿಗೆ ಸೇವೆ ನೀಡುತ್ತಿದೆ : ರವಿ ವಾಟೆಖಾನ್.

272
firstsuddi

ಬಣಕಲ್: ಜೆಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನದ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ದಿಗೆ ಸೇವೆ ನೀಡುತ್ತಿದೆ ಎಂದು ಜೆಸಿಐ ಬಣಕಲ್ ವಿಸ್ಮಯದ ನೂತನ ಅಧ್ಯಕ್ಷ ರವಿ ವಾಟೆಖಾನ್ ಹೇಳಿದರು.
ಬಣಕಲ್ ಗ್ರಾ.ಪಂ ಸಮುದಾಯ ಭವನದಲ್ಲಿ ನಡೆದ ಬಣಕಲ್ ಜೆಸಿಐನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಯುವ ಜನರು ಕ್ರಿಯಾಶೀಲರಾದಾಗ ಉತ್ತಮ ವ್ಯವಸ್ಥೆ ರೂಪಿಸಲು ಸಾಧ್ಯ. ಮನುಷ್ಯನ ವ್ಯಕ್ತಿತ್ವ ವಿಕಸನದ ತಳಹದಿಗೆ ಜೆಸಿಐ ಜನರಿಗೆ ಉತ್ತಮ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಪ್ರತಿಯೊಬ್ಬರನ್ನು ಸಜ್ಜುಗೊಳಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಗಿಡವಾಗಿ ಹುಟ್ಟಿ ಮರವಾಗಿ ಬೆಳೆದು ಫಲಕೊಟ್ಟರೆ ಆ ಮರ ಭೂಮಿಯಲ್ಲಿ ಹುಟ್ಟಿಯೂ ಸಾರ್ಥಕವೆನಿಸುತ್ತದೆ. ಹಾಗೆಯೆ ಜೆಸಿಐ ಸಂಸ್ಥೆ ದೇಶದಲ್ಲಿ ಮಾದರಿ ಕೆಲಸ ಮಾಡಿ ಸಮಾಜದ ಚಿಂತನೆಯಲ್ಲಿ ಉತ್ತಮ ಕೆಲಸಗಳಲ್ಲಿ ಛಾಪನ್ನು ಮೂಡಿಸಿಕೊಂಡಿದೆ ಎಂದರು. ಜೆಸಿಐ ವಲಯ ಅಧ್ಯಕ್ಷೆ ಸಮತಾ ವಿಕ್ಟಿನ್ ಮಿಸ್ಕಿತ್ ಮಾತನಾಡಿ ಜೆಸಿಐ ವ್ಯಕ್ತಿತ್ವ ವಿಕಸನಗೊಳಿಸುವ ಮೂಲಕ ಪರಿಪೂರ್ಣ ವ್ಯಕ್ತಿಗಳನಾಗಿಸುತ್ತಿದೆ. ಆ ಮೂಲಕ ಸಮಾಜದ ಏಳಿಗೆಗೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜೆಸಿಐನ ನೂತನ ಪಧಾಧಿಕಾರಿಗಳಾಗಿ ಕೃಷ್ಣೆಗೌಡ, ಪ್ರಮೋದ್ ಫಲ್ಗುಣಿ, ಶರತ್ ಫಲ್ಗುಣಿ, ಗಣೇಶ್, ಖಾದರ್ ಪರ್ವಾನ್, ಸುರೇಂಧ್ರ ಕೋಳೂರು, ಅರವಿಂದ ಕೋಳೂರು,ರವಿ, ಶಾಲಿನಿ ಸೋಮೇಶ್, ನಾಟ್ಯ ರಂಜಿತ್, ಚಂದನ ಯೋಗೇಶ್, ಅಜಯ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ರವಿ ದುಂಡುಗ, ಜೆಸಿಐ ವಲಯ ಉಪಾಧ್ಯಕ್ಷ ಪ್ರಸಾದ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಎನ್.ಟಿ, ಜೆಸಿಐ ಪಧಾಧಿಕಾರಿಗಳಾದ ಗಜೇಂದ್ರ, ಸೋಮೇಶ್, ಕವೀಶ್, ಲಕ್ಷ್ಮಣ್, ರವಿಪಟೇಲ್, ರವಿಶಂಕರ್, ರೇಖಾ ಪೂರ್ಣೇಶ್, ಪೂರ್ಣೆಶ್ ಮತ್ತಾವರ, ಸುದೀಶ್ ಸುವರ್ಣ ಮುಂತಾದವರು ಇದ್ದರು.