ಮೂಡಿಗೆರೆ : ದಾರಿಯಲ್ಲಿ ಸಿಕ್ಕ ಪರ್ಸನ್ನು ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದ ಮುಖ್ಯ ಶಿಕ್ಷಕ…

107
firstsuddi

ಮೂಡಿಗೆರೆ : ದಾರಿಯಲ್ಲಿ ಸಿಕ್ಕಿರುವ ನಗದು ಮತ್ತು ಅಗತ್ಯ ದಾಖಲೆಗಳನ್ನು ಒಳಗೊಂಡಿರುವ ಪರ್ಸನ್ನು ಮರಳಿ ವಾರಿಸುದಾರರಿಗೆ ನೀಡಿ ಇಲ್ಲಿಯ ಪ್ರಭೋದಿನಿ ಶಾಲೆಯ ಮುಖ್ಯ ಶಿಕ್ಷಕರು ಮಾನವೀಯತೆ ಮೆರೆದಿದ್ದಾರೆ.

ಶಿಕ್ಷಕ ಆನಂದ ಹೊರನಾಡು ರಸ್ತೆಯಲ್ಲಿ ಬೆಳಿಗ್ಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಚಲ್ಲಾ ಪಿಲ್ಲಿಯಾಗಿ ಬಿದ್ದಿರುವ ಪರ್ಸ್ ಕಂಡಿದೆ. ಪರ್ಸ್‍ನಲ್ಲಿ ಆರು ಸಾವಿರಕ್ಕೂ ಹೆಚ್ಚು ನಗದು, ಪಾನ್ ಕಾರ್ಡ್.ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಗಳು ಹೊಂದಿತ್ತು. ಅದರಲ್ಲಿರುವ ವಿಳಾಸ ಪತ್ತೆ ಹಚ್ಚಿದಾಗ ಅದು ಹೊರನಾಡಿನ ಅಭಿನಂದನ್ ಅವರದ್ದು ಎಂದು ತಿಳಿದು ಬಂದಿದ್ದು,ಅದನ್ನು ವಾಪಾಸು ನೀಡಿ ಮಾನವೀಯತೆ ಮೆರೆದಿದ್ದಾರೆ.

ಪರ್ಸ್ ಕಳೆದು ಕೊಂಡಿದ್ದ ಅಭಿನಂದನ್ ರಾತ್ರಿಯೆಲ್ಲ ತಾನು ಹೋಗು ಬಂದಿರುವ ದಾರಿಯಲ್ಲಿ ಹುಡುಕಾಡಿದರೂ ಪರ್ಸ್ ಸಿಕ್ಕಿರಲಿಲ್ಲ.ಪರ್ಸ ಪಡೆದುಕೊಂಡ ಅಬಿನಂದನ್ ಶಿಕ್ಷಕ ಆನಂದ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.