ಮೂಡಿಗೆರೆ : ದೇವರಮನೆ ಕಾಲಬೈರವೇಶ್ವರ ದೇವಸ್ಥಾನದಲ್ಲಿ ದೀಪಸ್ತಂಭ ಪೂಜೆ…

215
firstsuddi

ಕೊಟ್ಟಿಗೆಹಾರ : ದೇವರಮನೆಯ ಕಾಲಬೈರವೇಶ್ವರ ದೇವಸ್ಥಾನದಲ್ಲಿ ದೀಪಸ್ತಂಭದ ಪೂಜೆ ನಡೆಯಿತು.
ಕರೊನಾ ಕಾರಣದಿಂದಾಗಿ ಯುಗಾದಿ ಸಮಯದಲ್ಲಿ ದೀಪಸ್ತಂಭ ನಡೆಯದೆ ಹಿನ್ನಲೆಯಲ್ಲಿ ದೀಪಸ್ತಂಭ ಪೂಜೆ, ಚೋರಶಾಂತಿ ಹೋಮ, ಶನೀಶ್ವರ ಕಟ್ಟೆ ಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ ನಡೆಯಿತು. ಬೈರವನ ಕಲ್ಲಿನ ಪ್ರತಿಷ್ಠಾಪನೆ ಮಾಡಲಾಯಿತು.
ಅರ್ಚಕರಾದ ಕಟ್ಟಪಾಡಿ ಪ್ರವೀಣ್ ತಂತ್ರಿಗಳ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ನಡೆಯಿತು. ದೇವಸ್ಥಾನದ ಧರ್ಮದರ್ಶಿ ಮದನ್ ಹೆಗ್ಗಡೆ, ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನಕೇಶವಗೌಡ, ಖಜಾಂಚಿ ಅರುಣಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಹಳಿಬೈಲ್,ರಘು ಪಟ್ಟದೂರು, ಅರ್ಚಕರಾದ ನಾಗಭೂಷಣ್ ಭಟ್, ಗ್ರಾಮಸ್ಥರಾದ ಅಶೋಕಗೌಡ, ಜಗನ್ನಾಥ್‍ಗೌಡ, ಅರುಣ್, ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಇದ್ದರು.