ಮೂಡಿಗೆರೆ : ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ…ನೆರೆಸಂತ್ರಸ್ತನ ಬಾಳಿಗೆ ಬರೆ ಎಳೆದ ವಿಧಿ…

540
firstsuddi

ಬಣಕಲ್: ಕಳೆದ ವರ್ಷದ ನೆರೆಪ್ರವಾಹದಿಂದ ಊರು ಬಿಟ್ಟು ಬೇರೊಂದು ಊರಿನಲ್ಲಿ ನೆಲೆ ಕಂಡುಕೊಂಡಿದ್ದ ಮಧುಗುಂಡಿಯ ಕುಟುಂಬವೊಂದು ಮನೆಯೊಡನೆ ಹಾಸಿಗೆ ಹಿಡಿದಿರುವುದರಿಂದ ದಾನಿಗಳಿಂದ ನೆರೆವಿನ ನಿರೀಕ್ಷೆಯಲ್ಲಿದೆ.
ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಮಧುಗುಂಡಿಯಲ್ಲಿ ತೋಟ ಕಾರ್ಮಿಕ ರವಿ ಅವರ ಕುಟುಂಬ ವಾಸವಾಗಿದ್ದು ರವಿ ಅವರು ಮಧುಗುಂಡಿಯ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ವರ್ಷ ನೆರೆಪ್ರವಾಹದಿಂದ ಮಧುಗುಂಡಿ ಗ್ರಾಮದಲ್ಲಿ ಭೂಕುಸಿತವಾದ್ದರಿಂದ ರವಿ ಅವರ ಕುಟುಂಬ ಬಣಕಲ್‍ಗೆ ವಲಸೆ ಬಂದಿದ್ದು ಬಣಕಲ್‍ನ ಲಿಂಗಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಕಳೆದ ವಾರ ಮನೆ ಮಾಡನ್ನು ಸರಿ ಪಡಿಸಲು ಮನೆಯ ಮೇಲೆ ಹತ್ತಿದ್ದು ಕಾಲು ಜಾರಿ ಬಿದ್ದು ಸೊಂಟ ಹಾಗೂ ಬೆನ್ನಿಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಕೂಡಲೇ ಚಿಕ್ಕಮಗಳೂರು ಆಸ್ಪತ್ರಗೆ ದಾಖಲಿಸಲಾಗಿದ್ದು ವೈದ್ಯರು, ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಮುಂಚಿನ ಸ್ಥಿತಿಗೆ ಬರಲು ತಿಂಗಳುಗಳೆ ಹಿಡಿಯಬಹುದು. ಅಲ್ಲಿಯವರೆಗೂ ಚಿಕಿತ್ಸೆ ಪಡೆಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ರವಿ ಅವರು ಸೊಂಟ ಹಾಗೂ ಬೆನ್ನಿನ ಬಲವನ್ನೆ ಕಳೆದುಕೊಂಡು ನಡೆದಾಡಲು ಸಾದ್ಯವಾಗದಂತಾಗಿದೆ.
ಮನೆಯೊಡಯ ರವಿ ಅವರು ಹಾಸಿಗೆ ಹಿಡಿದಿರುವುದು ಪತ್ನಿ ಹಾಗೂ 4 ಮತ್ತು 2 ವರ್ಷದ ಪುಟ್ಟ ಮಕ್ಕಳಿಗೆ ದಿಕ್ಕು ತೋಚದಂತಾಗಿದೆ. ಚಿಕಿತ್ಸೆಗೆ ಸಾವಿರಾರು ರೂ ವೆಚ್ಚವಾಗಲಿದ್ದು ಚಿಕತ್ಸೆ ಕೊಡಿಸಲು ಕೂಡ ಸಾದ್ಯವಾಗದೆ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ನೆರವು ನೀಡುವ ಅಗತ್ಯವಿದೆ ರವಿ ಅವರ ಚಿಕಿತ್ಸೆಗೆ ನೆರವಾಗುವವರು ರವಿ ಅವರ ಮೂಡಿಗೆರೆ ಶಾಖೆಯ ವಿಜಯ ಬ್ಯಾಂಕ್‍ನ ಖಾತೆ ಸಂಖ್ಯೆ 115101012000222. ಐಎಪ್‍ಎಸ್‍ಸಿ ಕೋಡ್: ವಿಐಜೆಬಿ0001151 ಗೆ ಹಣ ಸಂದಾಯ ಮಾಡಬಹುದು. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ:8861324320.

‘ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಡಿಗೆ ಮನೆಯ ಮಾಲೀಕ ಬಿ.ಪಿ ಲಿಂಗಪ್ಪ ಅವರು, ರವಿ ಅವರು ಮಧುಗುಂಡಿಯಿಂದ ಕಳೆ ವರ್ಷ ಬಣಕಲ್‍ನ ಬಾಡಿಗೆ ಮನೆಗೆ ಬಂದಿದ್ದು ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಮತ್ತು ಕಳೆದ ಕೆಲ ತಿಂಗಳ ಬಾಡಿಗೆಯನ್ನು ಮಾನವೀಯತೆ ದೃಷ್ಟಿಯಿಂದ ಪಡೆದಿಲ್ಲ. ರವಿ ಅವರ ಚಿಕಿತ್ಸೆಗೆ ಹಣವಿಲ್ಲದೇ ಈ ಕುಟುಂಬ ಪರದಾಡುತ್ತಿದ್ದು ಈಗ ಹಾಸಿಗೆ ಹಿಡಿದಿರುವ ರವಿ ಅವರ ಚಿಕಿತ್ಸೆಗೆ ದಾನಿಗಳು ನೆರವಾಗಬೇಕಿದೆ ಎಂದು ಹೇಳಿದ್ದಾರೆ.