ಮೂಡಿಗೆರೆ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಮೊದಲ ಆಧ್ಯತೆಯಾಗಬೇಕು : ರೋನಾಲ್ಡ್ ಗೋಮ್ಸ್.

239
firstsuddi

ಬಣಕಲ್ : ಅಸಹಾಯಕರು ಹಾಗೂ ಬಡವರಿಗೆ ನೆರವಾಗುವುದೇ ಲಯನ್ಸ್ ಸಂಸ್ಥೆಯ ಉದ್ದೇಶವಾಗಿದ್ದು ಸೇವಾಮನೋಭಾವದಿಂದ ಎಲ್ಲರೂ ಕಾರ್ಯ ನಿರ್ವಹಿಸೋಣ ಎಂದು ಲಯನ್ಸ್ ಸಂಸ್ಥೆ ರಾಜ್ಯಪಾಲ ರೋನಾಲ್ಡ್ ಗೋಮ್ಸ್ ಹೇಳಿದರು.
ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು ಪರಿಸರ ಸಂರಕ್ಷಣೆ ಮೊದಲ ಆಧ್ಯತೆಯಾಗಬೇಕಿದೆ. ವಿದ್ಯಾರ್ಥಿಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಗಿಡ ನೆಟ್ಟು ಬೆಳೆಸುವ ಸಂಪ್ರದಾಯ ಬೆಳೆಸಬೇಕಿದೆ. ಟಿವಿ, ಮೊಬೈಲ್‍ಗಳನ್ನು ಹೆಚ್ಚು ನೋಡುವುದರಿಂದ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿದ್ದು ಕಣ್ಣಿನ ಆರೋಗ್ಯದ ಕಡೆಗೆ ಗಮನ ಕೊಡುವ ಅಗತ್ಯವಿದೆ ಎಂದರು.
ಮೂಡಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಕೆ ಲಕ್ಷ್ಮಣಗೌಡ ಮಾತನಾಡಿ ಪಂಚೇಂದ್ರಿಯಗಳಲ್ಲಿ ಕಣ್ಣು ಮುಖ್ಯ ಅಂಗವಾಗಿದ್ದು ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ನಿದ್ರಾವಸ್ಥೆ ಹೊರತು ಕಣ್ಣು ಸದಾ ಕಾರ್ಯಶೀಲವಾಗಿರುತ್ತದೆ. ಆದ್ದರಿಂದ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಿರಿ ಎಂದರು.

ಕಣ್ಣಿನ ವೈದ್ಯರಾದ ರಂಗನಾಥ ಮಾತನಾಡಿ ದೃಷ್ಟಿದೋಷವನ್ನು ಪ್ರಾಥಮಿಕ ಹಂತದಲ್ಲೆ ಕಂಡು ಹಿಡಿದರೆ ಮುಮದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು. ಗ್ರಾಮೀಣ ಮಟ್ಟದಲ್ಲಿ ಅಂದತ್ವವನ್ನು ತೊಡೆದು ಹಾಕುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ನೇತ್ರಾ ಪರೀಕ್ಷೆ ನಡೆಸಿ ಉಚಿತ ಕನ್ನಡಕ ವಿತರಣ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಲಯನ್ಸ್ ಸಂಸ್ಥೆಯ ಪಧಾಧಿಕಾರಿಗಳಾದ ಅನಿತ ರೋನಾಲ್ಡ್ ಗೋಮ್ಸ್, ಸತೀಶ್ ರೈ, ಹಳೇಕೋಟೆ ರಮೇಶ್, ಹಳೇಕೋಟೆ ರಮೇಶ್, ಗೋವರ್ದನ್ ಶೆಟ್ಟಿ, ಸುಪ್ರೀತಾ ಶೆಟ್ಟಿ, ಏಕಲವ್ಯ ಶಾಲೆಯ ಪ್ರಾಂಶುಪಾಲರಾದ ನಾಗರಾಜು ಮುಂತಾದವರು ಇದ್ದರು.