ಮೂಡಿಗೆರೆ : ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿದು ಮಾರ್ಗ ಬಂದ್ ಆಗಿದ್ದ ಕಾರಣ ದಾರಿಯಿಲ್ಲದೆ ತುರ್ತು ಮಂಗಳೂರು ಹೋಗಬೇಕಾಗಿದ್ದ ರೋಗಿ ಪರದಾಡುವಂತಾಗಿದ್ದು, ಬಣಕಲ್ ನಿವಾಸಿ ಸಾದಿಕ್ ಎಂಬುವವರು ಆರೋಗ್ಯ ಸರಿಯಿಲ್ಲದೇ ಬಳಲುತ್ತಿದ್ದರು. ಈ ವೇಳೆ ಪೊಲೀಸರ ಸಹಾಯದಿಂದ ಆಂಬುಲೆನ್ಸ್ ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ದಾಟಿದ್ದು, ಸದ್ಯ ಸಾದಿಕ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.










