ಮೂಡಿಗೆರೆ :ಬಾವಿಯೊಳಕ್ಕೆ ಬಿದ್ದ ನಾಗರಹಾವೊಂದು ಮೇಲೆ ಬರಲು ಸಾಧ್ಯವಾಗದೇ ಇಡೀ ರಾತ್ರಿ ನೀರಲ್ಲೇ ಈಜಿರೋ ಘಟನೆ ತಾಲೂಕಿನ ಬಣಕಲ್ ಸಮೀಪದ ಚಕ್ಕಮಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣ ಭಟ್ ಎಂಬುವರ ಮನೆ ಹಿಂದಿದ್ದ ಬಾವಿ ಮೇಲೆ ತೆವಳಿಕೊಂಡು ಹೋಗ್ತಿದ್ದ ನಾಗರಹಾವೊಂದು ಬಾವಿಗೆ ಬಿದ್ದಿದೆ. ಬಾವಿಗೆ ಸುತ್ತಲು ಸಿಮೆಂಟಿನಿಂದ ಪ್ಲಾಸ್ಟರ್ ಮಾಡಿದ್ದ ಕಾರಣ ಹಾವಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಇಡೀ ರಾತ್ರಿ ನೀರಲ್ಲೇ ಈಜಿದೆ. ಬೆಳಗ್ಗೆ ಎದ್ದು ಹೋದ ಕೃಷ್ಣ ಭಟ್ ಹಾವನ್ನ ಕಂಡು ಗಾಬರಿಯಾಗಿದ್ದಾರೆ. ಕೋಲಿನಿಂದ ಮೇಲೆ ಎತ್ತಲು ನೋಡಿದ್ದಾರೆ. ಆದ್ರೆ, ಧೈರ್ಯ ಸಾಕಾಗಿಲ್ಲ. ಕೂಡಲೇ ಸ್ನೇಕ್ ಆರೀಫ್ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಐದೇ ನಿಮಿಷಕ್ಕೆ ಹಾವನ್ನ ಎತ್ತಿ ಮೇಲೆ ಬಿಟ್ಟಿದ್ದಾರೆ. ಇಡೀ ರಾತ್ರಿ ನೀರಲ್ಲಿ ಈಜಿ ಸುಸ್ತಾಗಿದ್ದ ನಾಗರಹಾವಿಗೆ ಸ್ವಲ್ಪ ಹೊತ್ತು ನೆಲದ ಮೇಲೆ ಬಿಟ್ಟು ತದನಂತರ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.










