ಮೂಡಿಗೆರೆ : ಮಳೆಗಾಲದಲ್ಲಿ ನಮಗೆ ದಿಕ್ಕುದೆಸೆ ಇಲ್ಲ! ನಮ್ಮವರ ಕಷ್ಟ ಯಾರ ಕಿವಿಗೂ ಬೀಳುತ್ತಿಲ್ಲ? ಫಸ್ಟ್ ಸುದ್ದಿಯೊಂದಿಗೆ ಅಳಲನ್ನು ತೋಡಿಕೊಂಡ ಬೈರಾಪುರ ಜನತೆ!.

908
firstsuddi

ಮೂಡಿಗೆರೆ: ತಾಲ್ಲೂಕಿನಾದ್ಯಂತ ಈ ವರ್ಷ ಸುರಿದ ಭಾರಿ ಮಳೆಯ ಪರಿಣಾಮ ತಾಲ್ಲೂಕಿನಲ್ಲಿ ಹಲವು ಗ್ರಾಮಗಳು ಜಲಾವೃತವಾಗಿರುವ ಕುರಿತು ನಾವು ಕೇಳಿದ್ದೇವೆ. ಆದರೆ ಇದರ ಬಗ್ಗೆ ಎಲ್ಲರೂ ಯೋಚಿಸಿ ಕೇವಲ ಒಂದೇ ಊರಿಗೆ ಹೋಗಿ ಸಂತ್ರಸ್ಥರ ಆರೈಕೆ ಮಾಡುತ್ತಿರುವುದು ಸಂತೋಷದ ವಿಚಾರ ಆದರೆ ನಾವು ವರ್ಷಪೂರ್ತಿ ಇಲ್ಲಿ ಪಡುವ ಕಷ್ಟ ನೋಡಿದರೆ ನಮ್ಮನ್ನು ಹಾಗು ನಮ್ಮ ಕುಟುಂಬದ ಕಷ್ಟ ಯಾರು ಕೇಳುವರಿಲ್ಲದೇ ಇಡೀ ಗ್ರಾಮದ ಜನರು ಅನಾಥರಾಗಿದ್ದು, ಅದೂ ಅಲ್ಲದೇ ನಾವು ಇಲ್ಲಿ ದಿನಗಳನ್ನು ಕಳೆಯುವುದಿರಲಿ ನಮ್ಮ ದಿನನಿತ್ಯ ತಿನ್ನುವ ಆಹಾರ ಸಾಮಾಗ್ರಿಗಳಿಗೂ ಹಾಗು ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆ ಎಂದು ಬೈರಾಪುರ ಜನತೆ ಫಸ್ಟ್ ಸುದ್ದಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ತಾಲ್ಲೂಕಿನ ಬೈರಾಪುರ ಗ್ರಾಮ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ಪ್ರದೇಶವಾಗಿದ್ದು, ಇಲ್ಲಿ ನಾವು ಒಂದು ಅಥವಾ 5 ಎಕರೆಗಿಂತ ಕಡಿಮೆ ತೋಟ-ಗದ್ದೆಗಳಿದ್ದರೂ ಅದರಲ್ಲಿ ಬೆಳೆಯನ್ನು ಬೆಳೆದು ಇಲ್ಲಿ ಜೀವಿಸಬಹುದು ಎಂದು ನಾವು ಭಾವಿಸಿದರೆ ಅದೂ ಸಹ ಇಲ್ಲಿನ ವಾತಾವರಣಕ್ಕೆ ಅಡ್ಡಿಯಾಗಿ ನಾವು ಯಾರದ್ದೋ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ದಿನ ದೂಡುತ್ತಿದ್ದು, ಹಾಗೆಯೇ ನಮಗೆ ಇಲ್ಲಿಂದ ಪಟ್ಟಣಕ್ಕೆ ಹೋಗಬೇಕೆಂದರೆ ಇಲ್ಲಿ ಬರುವ ನಿಗದಿತ ಸಮಯದ ಬಸ್ಸನ್ನು ಕಾಯಬೇಕೇ ವಿನಃ ಅದನ್ನು ಬಿಟ್ಟರೆ ನಮಗೆ ಬೇರೆ ಯಾವುದೇ ಖಾಸಗಿ ವಾಹನದಲ್ಲಿ ತುರ್ತಾಗಿ ಎಲ್ಲಾದರು ಹೋಗಬೇಕಿದ್ದರೆ ದುಪ್ಪಟ್ಟು ಹಣ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಮಾಹಿತಿಯನ್ನು ನೀಡಿದರು.
ಕೇವಲ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿರುವ ಭೂಮಿಯ ಸ್ವರ್ಗ ಎಂದು ಕರೆಯುವ ನಾಣ್ಯ ಭೈರವೇಶ್ವರನ ಸನ್ನಿದಿಯಲ್ಲಿ ಬೈರಾಪುರ ಎಂಬ ಊರು ಮಳೆಗಾಲದಲ್ಲಿ ಇದು ನಮಗೆ ನರಕವೇ ಸರಿ! ಇಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಇದ್ದು, ಬೆಳಗ್ಗೆ ರಾತ್ರಿಯೆನ್ನದೇ ಕಾದು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಂದು ಬಾಯಿಗೆ ಬರದಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ. ಕೇವಲ ಅಧಿಕಾರಿಗಳು ಆನೆ ಹಾವಳಿಯಲ್ಲಿ ಯಾರಿಗಾದರು ಸಾವು ನೋವು ಸಂಭವಿಸಿದರೆ ಇದಕ್ಕೆ ನಮಗೆ ಶಾಶ್ವತ ಮುಕ್ತಿ ದೊರಕಿಸಿಕೊಡುವ ಪೊಳ್ಳು ಮಾತನ್ನು ರಾಜಕಾರಣಿಗಳು ಹೇಳುತ್ತಾರೆ. ಆದರೆ ನಮಗೆ ಅದು ಆಶ್ವಾಸನೆಯೇ ಹೊರತು ಶಾಶ್ವತವಾಗುವುದಿಲ್ಲ.

ಇತ್ತೀಚಿಗೆ ಅಕಾಲಿಕವಾಗಿ ಸುರಿದ ಭಾರಿ ಮಳೆಯ ಪರಿಣಾಮ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಡ್ಡ ಕುಸಿದು ಸಂಪೂರ್ಣ ಮುಚ್ಚಿ ಹೋಗಿದ್ದು, ಹಾಗೆಯೇ ಇಲ್ಲಿರುವ ಪುಟ್ಟೇಗೌಡ ಎಂಬುವವರಿಗೆ ಸೇರಿದ ಮನೆಯ ಮೇಲೆ ಗುಡ್ಡ ಕುಸಿದು ಮಣ್ಣಿನಲ್ಲಿ ಸಿಲುಕಿದ್ದು, ಅದರ ಪರಿಣಾಮ ಇಲ್ಲಿಗೆ ಬಂದಂತ ಅಧಿಕಾರಿಗಳ ತಂಡ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಿರುವುದರಿಂದ ಅವರು ಈಗ ಅವರ ತಮ್ಮನ ಮನೆಯಲ್ಲಿಯೇ ಒಂದು ವಾರಕ್ಕಿಂತಲೂ ಅಧಿಕ ವಾಸ ಇರುವುದರಿಂದ ಅವರಿಗೂ ಸಹ ದಿನನಿತ್ಯದ ಸಾಮಾಗ್ರಿ ಅಥವಾ ಒಪ್ಪತ್ತಿನ ಊಟಕ್ಕೂ ಕಷ್ಷದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವಿಚಾರದ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗ್ರಾಮದ ರಾಜು ಭಟ್, ಹಾಗು ಪೂರ್ಣೇಶ್ ಅವರು, ನಮ್ಮ ಊರಿನಲ್ಲಿ ಸುಮಾರು 60 ಕ್ಕಿಂತಲೂ ಅಧಿಕ ಕುಟುಂಬಗಳಿದ್ದು, ನಮಗೆ ಇಲ್ಲಿ ಈ ವರ್ಷ ಇಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ನಮಗೆ ಸುಮಾರು ಒಂದು ತಿಂಗಳಿನಿಂದ ಸಾರಿಗೆ ವ್ಯವಸ್ಥೆ ಇಲ್ಲದೇ ದಿನನಿತ್ಯದ ಸಾಮಾನುಗಳನ್ನು ಕೊಂಡುಕೊಳ್ಳಲು ಇಲ್ಲಿಂದ 3ರಿಂದ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿ ದುಪ್ಪಟ್ಟು ಹಣವನ್ನು ಕೊಟ್ಟು ಅಲ್ಲಿ ಸಿಗುವ ವಸ್ತು ಖರೀದಿ ಮಾಡಬೇಕಾಗುತ್ತದೆ. ಆದರೆ ನಮ್ಮ ದಿನಬಳಕೆಯ ಪ್ರಮುಖ ಯಾವುದಾದರು ವಸ್ತು ತರಕಾರಿಗಳನ್ನು ಕೊಳ್ಳಲು ಇಲ್ಲಿಂದ ಮೂಡಿಗೆರೆಗೆ ತೆರೆಳಲು ಸಾದ್ಯವಿಲ್ಲದೇ 15 ದಿನಗಳಿಂದ ನಾವು ಇಲ್ಲಿಯೇ ಇದ್ದೇವೆ. ನಮ್ಮ ಕಷ್ಟಕ್ಕೆ ಆ ದೇವರು ಬಿಟ್ಟರೆ ಬೇರೆ ಯಾರು ಬಂದಿರುವುದಿಲ್ಲ ಇದೀಗ ಪ್ರಥಮ ಭಾರಿಯಾಗಿ ನೀವು ಬಂದು ನಮ್ಮವರ ಕಷ್ಟವನ್ನು ಕೇಳಿದ್ದಕ್ಕೆ ನಿಮಗೆ ಕೃತಜ್ಞತೆಯನ್ನು ತಿಳಿಸುತ್ತೇವೆ. ನೀವು ನಮ್ಮ ಬಗ್ಗೆ ಸಮಾಜಕ್ಕೆ ತೋರಿಸಿ ಅವರಿಗೂ ನಮ್ಮ ಕಷ್ಟವೇನೆಂದು ತಿಳಿಯಲಿ ನಾವು ಸಹ ಸರಿಯಾದ ಊಟೋಪಚಾರ ಮಾಡದೇ ತಿಂಗಳುಗಳೇ ಕಳೆದಿದೆ. ನಮ್ಮಲ್ಲಿ ವೃದ್ದರೂ ಮಕ್ಕಳೂ ಬಹಳ ಕಷ್ಟದಲ್ಲಿ ಇದ್ದು, ನಮ್ಮ ಕಡೆಯೂ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸಲಿ ನಮ್ಮನ್ನೂ ಸಹ ನಿರಾಶ್ರಿತರೆಂದು ಸರ್ಕಾರ ಘೋಷಿಸಲಿ ಎಂದು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳದಲ್ಲಿ ಗ್ರಾಮಸ್ಥರಾದ ರೋಹಿತ್, ಚನ್ನಯ್ಯ, ಬಿ.ಪಿ ಹರೀಶ್, ಜಗದೀಶ್, ರುದ್ರೇಶ್, ಮುಂತಾದವರಿದ್ದರು.