ಮೂಡಿಗೆರೆ : ರೈತರಿಗೆ ಸಾಥ್ ಕೊಡಲು ನಾವು ರೆಡಿ ಅಂತಾ ಗದ್ದೆಗಿಳಿದ ಶಾಲಾ ಮಕ್ಕಳು…

695
firstsuddi

ಮೂಡಿಗೆರೆ : ಹದಿನೈದು ದಿನಗಳಿಂದ ಬಿಡದೇ ಸುರಿದ ಆಶ್ಲೇಷ ಮಳೆಯ ಅಬ್ಬರಕ್ಕೆ ಮನೆ, ರಸ್ತೆ, ತೋಟಗಳು ನೆಲಸಮವಾಗಿದ್ದು, ಹೇಮಾವತಿ ನದಿ ಪಾತ್ರದ ಗದ್ದೆಗಳು ಜಲಾವೃತಗೊಂಡು ಮರಳಿನ ಮಡುವಾಗಿದ್ದವು. ನಾಟಿ ಮಾಡಿದ ಸಸಿಗಳು ಪ್ರವಾಹದ ದಿಕ್ಕಿಗೆ ಸರಿದು ಹೋಗಿದ್ದವು. ಅಂದು ಚಿಂತಾಕ್ರಾಂತರಾಗಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಅದೇ ಗದ್ದೆಯಲ್ಲಿ ಪುನಃ ಸಸಿಗಳು ನಿಂತು ನಳ ನಳಿಸುತ್ತಿವೆ.

ಕೃಷ್ಣೇಗೌಡರಿಗೆ ಸಾಥ್ ನೀಡಿದ ನಳಂದಾ ಹಾಗೂ ಸೆಂಟ್ ಮಾರ್ಥಾಸ್ ಶಾಲೆಯ ಹೆಣ್ಣು ಮಕ್ಕಳು ಹಾಗೂ ಅಯ್ಯೋ ನಾವೇನು ಕಡಿಮೆ ಇಲ್ಲ ಅಂತಾ ಗಂಡು ಮಕ್ಕಳು ಈ ಮಕ್ಕಳನ್ನು ಹುರಿದುಂಬಿಸುತ್ತಿರುವ ರೈತ ಮಹಿಳೆಯರು, ಗದ್ದೆಯಲ್ಲಿ ಮಕ್ಕಳ ಓಡಾಟ, ಚೆಲ್ಲಾಟ ಕೊನೆಗೆ ಮಕ್ಕಳಾಟ ಇದೆಲ್ಲಾ ಕಂಡು ಬಂದಿದ್ದು, ತಾಲ್ಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ. 15 ದಿನಗಳ ಹಿಂದೆಯಷ್ಟೇ ಈ ಗದ್ದೆಗಳೆಲ್ಲಾ ಸಂಪೂರ್ಣ ಜಲಾವೃಗೊಂಡಿದ್ದು, ನಾಟಿ ಕೆಲಸ ಮಾಡಲಾಗಿದ್ದ ಗದ್ದೆಗಳಲ್ಲಿ ಮರಳು ತುಂಬಿ ಸಸಿಗಳು ಕೊಚ್ಚಿಕೊಂಡು ಹೋಗಿದ್ದು, ಅದರಿಂದ ಮತ್ತೆ ನಾಟಿ ಮಾಡಲು ಮುಂದಾಗಿದ್ದ ರೈತ ಕೃಷ್ಣೇಗೌಡರಿಗೆ ಶಾಲೆ ಮಕ್ಕಳು ಗದ್ದೆಗಿಳಿದು ನಾಟಿ ಮಾಡಲು ಸಾಥ್ ನೀಡಿದರು.

ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ನಳಂದಾ ಶಾಲೆಯ ವಿದ್ಯಾರ್ಥಿನಿ ತನ್ವಿಕಾ ಕಳೆದ 15 ದಿನಗಳಿಂದ ಸುರಿದ ಮಳೆ ಸಾವಿರಾರು ರೈತರ ಬದುಕನ್ನೇ ಬುಡಮೇಲು ಮಾಡಿದೆ. ನಮ್ಮ ತಾಲ್ಲೂಕಿನಲ್ಲಿ ನಾವು ಕೃಷಿಯಿಂದಲೇ ಬದುಕುತ್ತಿರುವುದು. ಭತ್ತದ ಗದ್ದೆ, ಕಾಫಿ, ಮೆಣಸು ಬೆಳೆಯನ್ನು ಮಳೆ ಬಲಿ ಪಡೆದಿದೆ. ತಾಲ್ಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಹೇಮಾವತಿ ನದಿ ದಿನಗಟ್ಟಲೆ ನಿಂತಿದ್ದರಿಂದ ಗದ್ದೆಗಳ ಮೇಲೆ ಮರಳು ಬಂದು ನಿಂತಿದೆ. ಹೀಗಾಗಿ ಅನೇಕ ರೈತರು ಕೈಚೆಲ್ಲಿ ಕೂತಿದ್ದಾರೆ. ಬೆರಳೆಣಿಕೆಯ ಮಂದಿಯಷ್ಟೇ ಗದ್ದೆಯನ್ನು ಕಷ್ಟಪಟ್ಟು ನಾಟಿ ಮಾಡುತ್ತಿದ್ದಾರೆ. ನಮ್ಮ ಶಾಲೆಯ ಮಕ್ಕಳು ಈ ದಿವಸ ಇಲ್ಲಿಗೆ ಬಂದು ರೈತರಿಗೆ ಸಾಥ್ ನೀಡಿದ್ದು ನನಗೆ ಸಂತೋಷ ತಂದಿದೆ. ರೈತ ಕೃಷ್ಣೇಗೌಡ ಅವರು ನಮಗೆ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ ಎಂದರು.

ರೈತ ಕೃಷ್ಣೇಗೌಡ ಮಾತನಾಡಿ ಈ ಬಾರಿಯ ಮಳೆಯ ಒಡೆತ ಮಲೆನಾಡಿನ ಜನರನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ. ಶತಮಾನಗಳಿಂದಲೂ ನಾವು ಎಂತೆಂತಾ ಮಳೆಗಾಲವನ್ನು ನೋಡಿದ ಜನರು ಈ ವರ್ಷದ ಮಳೆಗೆ ಎಲ್ಲಾ ರೈತರು ಸುಸ್ತು ಹೊಡೆದಿದ್ದಾರೆ. ಈ ಭಾಗದ ರೈತರು ರೈತರ ಬಾಳಂತು ಹೇಳ ತೀರದಾಗಿದೆ. ಒಟ್ಟಿನಲ್ಲಿ ರೈತರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ನಿಟ್ಟಿನಲ್ಲಿ ದಿನನಿತ್ಯ ಆಟ ಪಾಠದಲ್ಲೇ ತಲ್ಲೀನರಾಗಿದ್ದ ವಿದ್ಯಾರ್ಥಿಗಳು ಪ್ರವಾಹ ನಿಂತ ಮೇಲೆ ಗದ್ದೆಗೆ ಇಳಿದು ನಮ್ಮ ರೈತರಿಗೆ ನೆರವಾಗಿದ್ದು, ರೈತ ಕುಟುಂಬಗಳ ಪ್ರಶಂಸೆಗೆ ಪಾತ್ರವಾಯಿತು ಎಲ್ಲಾ ಮಕ್ಕಳು ವಿದ್ಯಾಭ್ಯಾಸದ ಜೊತೆಯಲ್ಲಿ ಕೃಷಿಯ ಕಡೆಗೆ ಗಮನ ಹರಿಸುವಂತಹ ಕೆಲಸ ಮಾಡಬೇಕು ಎಂದರು.