ಕೊಟ್ಟಿಗೆಹಾರ : ಪರಸ್ಪರ ಶಾಂತಿ ಸಹಭಾಳ್ವೆ, ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಿಸಿ ಎಂದು ಬಾಳೂರು ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ರೇಣುಕಾ ಹೇಳಿದರು.
ಬಾಳೂರು ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಬಕ್ರೀದ್ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ನಿಯಮ ಪಾಲಿಸಿ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ನಮಾಜ್ ಮಾಡಿ ಅನ್ಯೋನ್ಯತೆಯಿಂದ ಹಬ್ಬ ಆಚರಿಸಬೇಕು. ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಮಸೀದಿಗಳಲ್ಲಿ ಆರು ಅಡಿ ಅಂತರ ಕಾಪಾಡಿಕೊಂಡು ನಮಾಜ್ ಮಾಡಬೇಕು. ನಿಮ್ಮ ಹಬ್ಬದ ಆಚರಣೆ ಇತರ ಧರ್ಮದವರಿಗೆ ತೊಂದರೆಯಾಗದಂತೆ ಶಾಂತಿಯಿಂದ ಆಚರಿಸಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ತಾಲ್ಲೂಕು ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಕೃಷ್ಣ ಟೈಲರ್, ಮಹೇಶ್ ಮಲೆಮನೆ, ರಘು ಜಾವಳಿ, ರಮೇಶ್, ಸುದೀಪ್, ನಾರಾಯಣ್, ರಶೀದ್, ಅಲ್ತಾಪ್, ಅಬೂಬಕರ್, ಸಿಬ್ಬಂದಿಗಳಾದ ಮಹೇಶ್, ಹೇಮಂತ್, ವೈಭವ್,ಸತೀಶ್, ಸುಧಾರಾಣಿ, ರಾಜೇಂದ್ರ ಓಂಕಾರ್ ನಾಯ್ಕ್ ಇದ್ದರು.










