ಮೂಡಿಗೆರೆ : ಸಂಘಟಿತ ಪ್ರಯತ್ನದಿಂದ ಸಮಗ್ರ ಅಭಿವೃದ್ದಿ ಸಾಧ್ಯ : ರಾಮಚಂದ್ರ.

283
firstsuddi

ಕೊಟ್ಟಿಗೆಹಾರ: ಸಂಘಟಿತ ಪ್ರಯತ್ನದಿಂದ ಸಮಗ್ರ ಅಭಿವೃದ್ದಿ ಸಾಧ್ಯವಿದ್ದು ಸಂಘಟಿತರಾಗಿ ಕಾರ್ಯ ನಿರ್ವಹಿಸಲು ಸಂಘಟನೆಗಳು ಅತ್ಯವಶ್ಯಕವಾಗಿದೆ ಎಂದು ಬಣಕಲ್‍ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ನೂತನ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್‍ನ ಸುಭಾಷನಗರದ ಸಮುದಾಯಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮುದಾಯವನ್ನು ಸಂಘಟಿಸುವುದು, ಸಮುದಾಯದ ಆತ್ಮಸ್ಥೈರ್ಯವನ್ನು ಬಲಪಡಿಸುವುದು, ಸಮುದಾಯದ ಜನರಲ್ಲಿ ಸಹಕಾರವನ್ನು ಸಾಧಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕಕೆ ಶ್ರಮಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಉದ್ದೇಶವಾಗಿದೆ ಎಂದರು.
ಸಮುದಾಯದ ಹಿರಿಯರಾದ ಈಶ್ವರ್ ಬಾಳೂರು ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ದಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಶೋಷಿತ ವರ್ಗದ ಧ್ವನಿಯಾಗಿದ್ದ ನಾರಾಯಣಗುರುಗಳು ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪಧಾಧಿಕಾರಿಗಳಾದ ಕೆ.ಎಂ ªರವಿ ಬಾನಳ್ಳಿ, ಗಂಗಾದರ್ ಗುಡ್ಡಟ್ಟಿ, ವೇಲಾಯುಧನ್, ನಳರಾಜ್, ರಾಘವ, ಮಂಜುನಾಥ್ ಬಿ.ಆರ್, ರಾಜೇಶ್, ಪ್ರಜ್ವಲ್ ಮತ್ತಿಕಟ್ಟೆ, ಮಹೇಶ್ ಜಾರ್‍ಗಲ್, ಮೋಹನ್ ಗುಡ್ಡಟ್ಟಿ, ಕೇಶವ, ಶೈಲಾ, ಬಾಲಕೃಷ್ಣ ಮತ್ತಿಕಟ್ಟೆ, ಶರತ್ ಮತ್ತಿಕಟ್ಟೆ, ಮಲ್ಲಿಕಾರ್ಜುನ್ ಬಾಳೂರು, ಪ್ರಭಾಕರ್, ಶಕುಂತಳಾ, ಪ್ರಭಾವತಿ, ಸ್ನೇಹಾಪ್ರೀಯಾ, ಶಾಲಿನಿ, ಯಶೋಧಾ, ದಿವಿನ್, ಸಿಂದೂ ಮುಂತಾದವರು ಇದ್ದರು.
ಬಣಕಲ್‍ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪಧಾಧಿಕಾರಿಗಳಾಗಿ ರಾಮಚಂದ್ರ (ಅಧ್ಯಕ್ಷ), ರಾಘವ ಕೆ (ಉಪಾಧ್ಯಕ್ಷ), ಕೆ.ಎಂ ರವಿ ಬಾನಳ್ಳಿ (ಪ್ರಧಾನ ಕಾರ್ಯದರ್ಶಿ), ಗಂಗಾಧರ್ ಗುಡ್ಡಟ್ಟಿ (ಖಜಾಂಚಿ), ವೇಲಾಯುಧನ್, ಈಶ್ವರ್ ಬಾಳೂರು ಮತ್ತು ನಳರಾಜ್ (ಗೌರವಾಧ್ಯಕ್ಷರು), ಮಂಜುನಾಥ್ ಬಿ.ಆರ್ ಮತ್ತು ರಾಜೇಶ್ (ಸಹ ಕಾರ್ಯದರ್ಶಿಗಳು), ಪ್ರಜ್ವಲ್ ಮತ್ತಿಕಟ್ಟೆ, ಮಹೇಶ್ ಜಾರ್‍ಗಲ್, ಮೋಹನ್ ಗುಡ್ಡಟ್ಟಿ, ಕೇಶವ್ ಸುಭಾಷನಗರ, ಬಾಲಕೃಷ್ಣ ಮತ್ತಿಕಟ್ಟೆ (ಸಂಚಾಲಕರು), ಶರತ್ ಮತ್ತಿಕಟ್ಟೆ, ಮಲ್ಲಿಕಾರ್ಜುನ ಬಾಳೂರು (ಸಂಘಟನಾ ಕಾರ್ಯದರ್ಶಿಗಳು) ಆಯ್ಕೆಯಾದರು.