ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಿರೇ? ಹಾಗಾದರೆ ಇನ್ನು ಮುಂದೆ ಎಚ್ಚರ!…

581
firstsuddi

ಮೂಡಿಗೆರೆ : ಪಟ್ಟಣದಲ್ಲಿರುವ ಎಂ.ಜಿ.ಎಂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀವೇನಾದರು ಚಿಕಿತ್ಸೆ ಪಡೆಯುತ್ತಿದ್ದರೆ ನಿಮ್ಮ ಜೀವಕ್ಕೆ ಕಂಟಕ ತರಬಹುದಾದ ಸನ್ನಿವೇಶ ಎದುರಾಗಬಹುದು ಹೌದು ಅದು ಹೇಗೆ ಸಾದ್ಯ ಎಂದು ನಿಮ್ಮ ಅನಿಸಿಕೆಯೇ ಅಥವಾ ಇಂತಹ ವಿಷಯದ ಬಗ್ಗೆ ನಿಮಗೆ ಕುತೂಹಲವೇ ಹೌದು ಅದಕ್ಕೆ ಪೂರಕವೆಂಬತೆ ಇಲ್ಲಿದೆ ಒಂದು ಸಂಪೂರ್ಣ ಮಾಹಿತಿ.
ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಮೂಳೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರೇಶ್ ವೈ ನರೇಗಲ್ ಎಂಬ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಹಾಗೂ ವೈದ್ಯರಲ್ಲಿ ಅನೈತಿಕ ರೀತಿ ವರ್ತನೆ ಹಾಗೂ ಚಿಕಿತ್ಸೆಯಲ್ಲಿ ಏರುಪೇರು ಮಾಡಿ ರೋಗಿಗಳ ಜೀವನದಲ್ಲಿ ಆಟವಾಡುತ್ತಿದ್ದು ಮತ್ತು ಈ ಕುರಿತು ಮೇಲಾಧಿಕಾರಿಗಳಿಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಇವರನ್ನು ಕೆಲವು ತಿಂಗಳ ಹಿಂದೆ ಸೇವೆಯಿಂದ ಅಮಾನತುಗೊಂಡು ಆದೇಶವಾಗಿದ್ದರೂ ಇವರು ಮಾನಸಿಕ ಅಸ್ವಸ್ಥರಂತೆ ಇವರಿಗೆ ಇಲ್ಲಿ ಕೆಲಸವಿಲ್ಲದಿದ್ದರೂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ರೋಗಿಗಳ ಪ್ರಗತಿ ಚೀಟಿಯಲ್ಲಿ ಔಷÀದಿಯನ್ನು ಸೂಚಿಸುವುದಲ್ಲದೇ ಅವರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿರುವ ಬಗ್ಗೆ ದಿನದಿಂದ ದಿನಕ್ಕೆ ದೂರುಗಳು ಎಚ್ಚಾಗುತ್ತಿರುವ ಕುರಿತು ವರದಿಯಾಗಿದೆ.
ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ತನ್ನ ಅಣ್ಣನನ್ನು ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ ಖಲಂದರ್ ರವರು ಪತ್ರಿಕೆಗೆ ಹೇಳಿಕೆ ನೀಡಿ ನಮ್ಮ ಸಹೋದರನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ವಿಶೇಷ ಕೊಠಡಿಯಲ್ಲಿ ವೈದ್ಯರಾದ ಡಾ ಸಂತೋಷ್ ಅರಸ್ ರವರು ಚಿಕಿತ್ಸೆಯನ್ನು ನೀಡುತ್ತಿದ್ದ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುವ ವೈದ್ಯರಾದ ವೀರೇಶ್ ಎಂಬುವವರು ಪದೇ ಪದೇ ನಮ್ಮ ಕೊಠಡಿಯನ್ನು ಅಕ್ರಮ ಪ್ರವೇಶ ಮಾಡಿ ನಮ್ಮ ವೈದ್ಯರು ನೀಡಿದ ಔಷದಿಗೆ ಬದಲು ಬೇರೆಯದೇ ಔಷದಿಯನ್ನು ಸೂಚಿಸುವುದಲ್ಲದೇ ನಮಗೆ ತೊಂದರೆಯನ್ನು ನೀಡಿದ್ದು ಈ ಕುರಿತು ನಾನು ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಿಗೆ ಲಿಖಿತ ದೂರು ನೀಡಿರುತ್ತೇನೆ ಎಂದರು.
ವಿಷಯದ ಕುರಿತು ಪತ್ರಿಕೆಯೊಂದಿಗೆ ಪ್ರತಿಕ್ರಹಿಸಿದ ಇಲ್ಲಿನ ವೈದ್ಯರು ಹಾಗು ಕೆಲವು ಸಿಬ್ಬಂದಿಗಳು ನಮಗೆ ಇವರ ಅಕ್ರಮ ಪ್ರವೇಶದಿಂದ ಹಾಗೂ ಅನಾಧಿಕೃತ ಸಲಹೆಯಿಂದ ಮಾನಸಿಕ ಹಿಂಸೆಯಾಗಿದ್ದು ಇವರು ನಾವು ಕರ್ತವ್ಯದಲ್ಲಿದ್ದ ಸಮಯದಲ್ಲೇ ನಾವು ದಾಖಲಿಸಿದ ರೋಗಿಗಳ ಬಳಿ ಹೋಗಿ ಅವರಿಗೆ ಬೇರೆಯದೇ ಸಲಹೆ ಹಾಗೂ ಚಿಕಿತ್ಸೆಗೆ ಸೂಚಿಸುವುದರಿಂದ ಏನಾದರು ರೋಗಿಗಳ ಪ್ರಾಣ ಹಾನಿ ಸಂಭವಿಸಿದ್ದಲ್ಲಿ ಇದಕ್ಕೆ ಹೊಣೆ ಯಾರು ಇಂತಹ ವಿಚಾರವನ್ನು ಅತಿ ಸೂಕ್ಷ್ಮವಾಗಿ ಮೆಲಾಧಿಕಾರಿಗಳು ಗಮನ ಹರಿಸಿ ಮುಂದೊಂದು ದಿನ ಆಗಬಹುದಾದ ದೊಡ್ಡ ಅನಾಹುತವನ್ನು ತಡೆಯದಿದ್ದಲ್ಲಿ ಇದರ ಹೊಣೆ ಯಾರು ಹೊರುವರು ಎಂದು ತಮ್ಮಲ್ಲಿರುವ ಅಸಮಾದಾನವನ್ನು ಹೊರಹಾಕಿದರು.
ಸರ್ಕಾರಿ ವೈದ್ಯರಾದ ವೀರೇಶ್ ರವರು ಈಗಾಗಲೇ ಅಮಾನತಿನಲ್ಲಿದ್ದು ಇವರು ಮನಬಂದಂತೆ ಆಸ್ಪತ್ರೆಗೆ ಅಕ್ರಮ ಪ್ರವೇಶಿಸಿ ಅಲ್ಲಿರುವ ರೋಗಿಗಳ ಚಿಕಿತ್ಸಾ ಪ್ರಗತಿ ಪಟ್ಟಿಯಲ್ಲಿ ಮನಬಂದಂತೆ ಬರೆಯುವುದಲ್ಲದೇ ಅದನ್ನು ಗೀಚಿ ಹೋಗುವುದು ಆಸ್ಪತ್ರೆಯ ಆಡಳಿತ ಕಛೇರಿಗೆ ಪ್ರವೇಶಿಸಿ ಅಲ್ಲಿಯ ಟೇಬಲ್ ಖುರ್ಚಿಯನ್ನು ಎಳೆದಾಡುವುದು ಅಲ್ಲಿದ್ದ ದಾಖಲಾತಿ ಪುಸ್ತಕದ ಹಾಳೆಯಲ್ಲಿ ಗೀಚುವುದು ಆಸ್ಪತ್ರೆಯ ಸಿಬ್ಬಂದಿಗಳನ್ನು ನಿಂದಿಸುವುದು ಇವರಿಗೆ ಇದು ನಿರಂತರ ಕೆಲಸವಾಗಿದೆ.ಇವರನ್ನು ಏತಕ್ಕಾಗಿ ಆಸ್ಪತ್ರೆಯಲ್ಲಿ ಇಟ್ಟಿದ್ದಾರೋ ಅಥವಾ ಇವರ ವರ್ತನೆಯನ್ನು ಮೇಲಾಧಿಕಾರಿಗಳು ಕಂಡು ಕಾಣದಂತೆ ಕಣ್ಣುಮುಚ್ಚಿ ಕುಳಿತಿರುವರೇ ಅಥವಾ ಇಂತಹ ಮಾನಸಿಕ ಅಸ್ವಸ್ಥ ವೈದ್ಯರ ಸಹವಾಸದಿಂದ ಮುಂದೇನಾದರು ಅವಘಡ ಸಂಭವಿಸಿದಲ್ಲಿ ಇದಕ್ಕೆ ನೇರ ಜಿಲ್ಲಾಡಳಿತ ಹೊಣೆಯನ್ನು ಹೊರಬೇಕಾಗುತ್ತದೇ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.