ಮೂಡಿಗೆರೆ : ಹೆಚ್ಚುವರಿ ಕೊರೊನಾ ಲಸಿಕೆಯನ್ನು ಪೂರೈಸುವಂತೆ ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ…

112
firstsuddi

ಮೂಡಿಗೆರೆ : ಕಳಸ ತಾಲ್ಲೂಕಿಗೆ ಹೆಚ್ಚುವರಿ ಕೊರೊನಾ ಲಸಿಕೆಯನ್ನು ಪೂರೈಕೆ ಮಾಡಿಕೊಡಬೇಕು ಎಂದು ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣ ಆಗ್ರಹಿಸಿದೆ.

ಈ ಬಗ್ಗೆ ಇಂದು ಕಳಸ ನಾಢ ಕಚೇರಿ ಉಪತಹಶಿಲ್ದಾರ್ ಸುಧಾ ಅವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಕಳಸ ತಾಲ್ಲೂಕಿನಲ್ಲಿ ಹಲವಾರು ಹಳ್ಳಿಗಳಿದ್ದು, ಪ್ರತಿನಿತ್ಯ ಈ ಹಳ್ಳಿಗಳಿಂದ ಜನರು ಕೆಲಸ ಕಾರ್ಯಗಳನ್ನು ಬಿಟ್ಟು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕಳಸಕ್ಕೆ ಬರುತ್ತಿದ್ದಾರೆ. ಆದರೆ ಅಲ್ಲಿ ಬಂದಿರುವ ಎಲ್ಲರಿಗೂ ಲಸಿಕೆ ಸಿಗದೆ ವಾಪಾಸು ಹೋಗಬೇಕಾದ ಪರಿಸ್ಥಿತಿ ಇದೆ.
ಆದ್ದರಿಂದ ಕಳಸ ಬಾಗಕ್ಕೆ ಹೆಚ್ಚುವರಿ ಕರೋನ ಲಸಿಕೆ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಕೇಳಿಕೊಂಡಿದ್ದಾರೆ.