ಮೂಡಿಗೆರೆ : ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಉತ್ಸವಕ್ಕೆ ತೆರೆ…

276
firstsuddi

ಕಳಸ : ಇಲ್ಲಿಯ ಆದಿಶಕ್ತ್ಯಾತ್ಮಕ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ರಥೋತ್ಸವವು ಇಂದು ವಿಜೃಂಭಣೆಯಿಂದ ನೆರವೇರಿತು.
ಇಂದು ಬೆಳಿಗ್ಗೆ ವಿಶೇಷ ಪೂಜೆಯ ಬಳಿಕ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆದು ಬಳಿಕ ಸುತ್ತಿ ಪಾಠಕರು ಸುತ್ತಿ ಘೋಷಗಳನ್ನು ಪಟಿಸುತ್ತಾ, ಚತ್ರಿ ಚಾಮರ ಮಂಗಳ ವಾದ್ಯಗಳೊಂದಿಗೆ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದ ಬಳಿ ದೇವರನ್ನು ತರಲಾಯಿತು.
ರಥದ ಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.
ಬಳಿಕ ಸಮಸ್ತ ಭಕ್ತಾಧಿಗಳೂ ಭಾಗಿಯಾಗಿ ದೇವರಿಗೆ ಫಲ, ಪುಷ್ಪಾದಿ, ಅರ್ಚನೆ ಸೇವೆ ಮಾಡುವುದರೊಂದಿಗೆ ತಾವು ಬೆಳೆದ ಕಾಫಿ, ಕಾಳು ಮೆಣಸು, ಏಲಕ್ಕಿ ಮುಂತಾದ ದವಸ ಧಾನ್ಯಗಳನ್ನು ಬ್ರಹ್ಮರಥಕ್ಕೆ ಎಸೆದು ಪುನೀತರಾದರು.
ಭಕ್ತಾದಿಗಳು ರಥದ ಚಕ್ರಕ್ಕೆ ತೆಂಗಿನಕಾಯಿಯನ್ನು ಒಡೆದು ತಮ್ಮ ಹರಕೆಯನ್ನು ತೀರಿಸಿಕೊಂಡರು. ಬಳಿಕ ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾಧಿಗಳು ಎಳೆದರು. ರಥವೇರಿ ಕುಳಿತ ದೇವರು ತನ್ಮಯರಾಗಿ, ಚಿನ್ಮಯ ಮೂರ್ತಿಯಾಗಿ ಕಂಗೊಳಿಸುತ್ತಿದ್ದರು. ಈ ಒಂದು ಸುಂದರ ದೃಶ್ಯವನ್ನು ನೆರೆದಿದ್ದ ಸಾವಿರಾರು ಭಕ್ತರು ಭಕ್ತಿಯಿಂದ ಕಣ್ತುಂಬಿಕೊಂಡರು.