ಯುವ ದಸರಾ ವೇದಿಕೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ…

306
firstsuddi

ಮೈಸೂರು : ಯುವ ದಸರಾ ವೇದಿಕೆಯಲ್ಲಿ ಗಾಯಕ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾವಿರಾರು ಪ್ರೇಕ್ಷಕರ ಎದುರಲ್ಲೇ ಚಂದನ್ ಶೆಟ್ಟಿ ಅವರು ತಮ್ಮ ಪ್ರೇಮ ನಿವೇಧನೆಯನ್ನು ನಿವೇದಿತಾ ಗೌಡ ಅವರಿಗೆ ತಿಳಿಸಿದ್ದಾರೆ. ಪ್ರೇಮ ನಿವೇಧನೆಯನ್ನು ತಿಳಿಸುವ ಮುನ್ನ ಮಾತನಾಡಿದ ಚಂದನ್ ಶೆಟ್ಟಿ ಅವರು ವಿದೇಶದ ಸುಂದರ ಪ್ರವಾಸಿ ತಾಣದಲ್ಲಿ ಹೇಳಬೇಕು ಅಂದುಕೊಂಡ ವಿಷಯವನ್ನು ನಿಮ್ಮ ಮುಂದೆ ಹೇಳುತ್ತೇನೆ. ಇಷ್ಟೊಂದು ದೊಡ್ಡ ವೇದಿಕೆಯಲ್ಲಿ ನನ್ನನ್ನು ಇಷ್ಟ ಪಡುವ ಜನರ ಮುಂದೆ ಹೇಳುವುದು ಉತ್ತಮ. ನಾನು ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಮನೆಯಲ್ಲಿ 105 ದಿನಗಳನ್ನು ಜೊತೆಯಾಗಿ ಕಳೆದಿದ್ದೇವೆ. 105ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರು ಅರ್ಥಮಾಡಿಕೊಂಡಿಲ್ಲ. ಹೀಗಾಗಿ ನಾನು ನನ್ನ ಪ್ರೇಮ ನಿವೇಧನೆಯನ್ನು ತಿಳಿಸುತ್ತೇನೆ ಎಂದು ಮೊಣಕಾಲೂರಿ ಉಂಗುರವನ್ನು ಹಿಡಿದು ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿದ್ದಾರೆ.