ರಶ್ಮಿಕಾ ಮಂದಣ್ಣ ನಟಿಸಿರುವ “ಡಿಯರ್ ಕಾಮ್ರೇಡ್” ಚಿತ್ರದ ಬಿಡುಗಡೆ ವಿರೋಧಿಸಿ ಕನ್ನಡಪರ ಹೋರಾಟಗಾರರ ಪ್ರತಿಭಟನೆ…

355
firstsuddi

ಬೆಂಗಳೂರು : ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ನಟಿಸಿರುವ “ಡಿಯರ್ ಕಾಮ್ರೇಡ್” ಚಿತ್ರದ ಬಿಡುಗಡೆ ವಿರೋಧಿಸಿ ಸಿಲಿಕಾನ್ ಸಿಟಿಯ ಕೆಜಿ ರಸ್ತೆಯ ಬಳಿ ಇರುವ ಮೇನಕಾ ಚಿತ್ರಮಂದಿರ ಬಳಿ ಕನ್ನಡಪರ ಹೋರಾಟಗಾರರು “ಡಿಯರ್ ಕಾಮ್ರೇಡ್” ಚಿತ್ರದ ಪ್ರದರ್ಶನವನ್ನು ನಿಲ್ಲಿಸಿ ಎಂದು ಪ್ರತಿಭಟನೆ ನಡೆಸಿದ್ದು, ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ತಮಿಳು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನನಗೆ ಕನ್ನಡ ಮಾತನಾಡಲು ಬರುವುದಿಲ್ಲ, ಮಾತನಾಡಲು ಕಷ್ಟ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶಗೊಂಡ ಕನ್ನಡ ಪರ ಹೋರಾಟಗಾರರು ಫಿಲ್ಮ್ ಛೇಂಬರ್‍ಗೆ ರಶ್ಮಿಕಾ ಮಂದಣ್ಣ ಅಭಿನಯಿಸಿದ ಯಾವುದೇ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ತಿಳಿಸಿದ್ದರು. ಅದರಂತೆ ಬಿಡುಗಡೆಗೆ ಸಜ್ಜಾಗಿದ್ದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿನಯಿಸಿರುವ “ಡಿಯರ್ ಕಾಮ್ರೇಡ್” ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.