ರಾಜ್ಯದ ವಿವಿಧ ಉದ್ಯಮಿಗಳಿಗೆ ಐಟಿ ಶಾಕ್ : ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಐಟಿ ದಾಳಿ…

110
First Suddi

ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ಪ್ರತಿಷ್ಠಿತ ಬಿಜಿಎಸ್ ಶಿಕ್ಷಣ ಸಂಸ್ಥೆ, ತುಮಕೂರಿನ ಶ್ರೀದೇವಿ ಕಾಲೇಜು, ದಾವಣಗೆರೆಯ ಶಾಮನೂರು ಶಿವಶಂಕರಪ್ಪನವರ ಒಡೆತನದ ಮೆಡಿಕಲ್ ಕಾಲೇಜು, ಮಂಗಳೂರಿನ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಸೇರಿದಂತೆ ಉದ್ಯಮಿಗಳ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಐಟಿ ಇಲಾಖೆ ಇಂದು ದಾಳಿ ನಡೆಸಿದೆ.
ಮಂಗಳೂರಿನ ವಿವಿಧ ಉದ್ಯಮಿಗಳ ಆಸ್ಪತ್ರೆ, ಮನೆ, ಕಚೇರಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಖ್ಯಾತ ಉದ್ಯಮಿ ಎ ಜೆ ಶೆಟ್ಟಿ ಅವರ ಬೆಂದೂರ್ ವೆಲ್ ನಲ್ಲಿರುವ ನಿವಾಸದ ಮೇಲೆ ಹಾಗೂ ಮಂಗಳೂರಿನಲ್ಲಿರುವ ಎ ಜೆ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ ಮೇಲೆ ದಾಳಿ ನಡೆದಿದೆ.
ಅಕ್ರಮ ಆಸ್ತಿ ಸಂಪಾದನೆ ಹಾಗೂ ಕಪ್ಪು ಹಣ ಸಂಗ್ರಹದ ಆರೋಪ ಕೇಳಿಬಂದಿದ್ದು ಈ ಸಂಬಂಧ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ತಂಡ ತಂಡವಾಗಿ ಕರ್ನಾಟಕದ ವಿವಿಧ ನಗರಗಳಿಗೆ ಆಗಮಿಸಿದ್ದು ಮೆಡಿಕಲ್ ಕಾಲೇಜು, ,ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.