ರಾಯಚೂರು : ಪೋಷಕರು ಬೈದಿದ್ದಕ್ಕೆ ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ!

101
Firstsuddi

ರಾಯಚೂರು : ಕಾಲೇಜಿಗೆ ಹೋಗುವಂತೆ ಪೋಷಕರು ಬೈದಿದ್ದಕ್ಕೆ ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.

ಲಿಂಗಸುಗೂರು ತಾಲ್ಲುಕಿನ ಗುಂತಗೋಳ ಗ್ರಾಮದ ಮಂಜುನಾಥ್ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಲಿಂಗಸುಗೂರು ಪರಿಶಿಷ್ಟ ವರ್ಗಗಳ ವಸತಿನಿಲಯದಲ್ಲಿದ್ದ ಮೊದಲ ವರ್ಷದ ಬಿಎ ವಿದ್ಯಾರ್ಥಿ, ಎಂಟತ್ತು ದಿನಗಳಿಂದ ತನ್ನ ಗ್ರಾಮದಲ್ಲೇ ಉಳಿದಿದ್ದ. ಕಾಲೇಜಿಗೆ ಹೋಗುವಂತೆ ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಜಗಳವಾಡಿ ವಸತಿ ನಿಲಯಕ್ಕೆ ಬಂದಿದ್ದ.

ವಿದ್ಯಾರ್ಥಿ ಮನೆಯಲ್ಲಿ ಜಗಳವಾಗಿದ್ದಕ್ಕೆ ವಿಷ ಸೇವಿಸಿರುವುದಾಗಿ ಸ್ನೇಹಿತರಿಗೆ ಹೇಳಿಕೊಂಡಿದ್ದಾನೆ. ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ಸ್ನೇಹಿತರು ಕೂಡಲೇ ಲಿಂಗಸುಗೂರು ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.