ರಾಯಚೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿಗ್ರಹ ನಿರ್ಮಿಸಿದ ರೈತ ಪ್ರಭುರೆಡ್ಡಿ ಕೊಳ್ಳೂರು…

448
firstsuddi

ರಾಯಚೂರು : ರೈತರೊಬ್ಬರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ವಿಗ್ರಹ ನಿರ್ಮಿಸಿ ನಿತ್ಯವೂ ಪೂಜೆ ಮಾಡುತ್ತಿದ್ದು, ಕೃಷ್ಣಾನದಿ ನೀರನ್ನು ನಾಲೆ ಯೋಜನೆಯ ಮೂಲಕ ದೇವದುರ್ಗ ತಾಲ್ಲೂಕಿಗೆ ನೀರು ಹರಿಸಿದ್ದರಿಂದ ಸಾವಿರಾರು ಎಕರೆ ಹೊಲ ಗದ್ದೆಗಳು ಹಸಿರಿನಿಂದ ನಳನಳಿಸುತ್ತಿದ್ದು, ಇದಕ್ಕೆ ಕಾರಣರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ವಿಗ್ರಹವನ್ನು ದೇವದುರ್ಗ ತಾಲ್ಲೂಕಿನ ಗಣಧಾಳ ಗ್ರಾಮದ ರೈತ ಪ್ರಭುರೆಡ್ಡಿ ಕೊಳ್ಳೂರು ಅವರು ಸ್ಥಾಪಿಸಿ ಭಾರತ ರತ್ನ, ಕರ್ನಾಟಕದ ಕಣ್ಮಣಿ, ದೇವದುರ್ಗ ತಾಲ್ಲೂಕಿನ ದೊರೆ ಎಂದು ಪುತ್ಥಳಿ ಮೇಲೆ ಬರೆಸಿದ್ದು, ಮೂರ್ತಿ ಸ್ಥಾಪಿಸಲು 4.80 ಲಕ್ಷ ರೂ ಖರ್ಚು ಮಾಡಿದ್ದು, ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡುವ ಮೂಲಕ ರೈತ ಪ್ರಭುರೆಡ್ಡಿ ಅವರು ಅಭಿಮಾನ ಮೆರೆದಿದ್ದಾರೆ.