ರೈತ ಮಹಿಳೆ ಬಗ್ಗೆ ಸಚಿವ ಮಾದುಸ್ವಾಮಿ ‘ರಾಸ್ಕಲ್’ ಪ್ರಯೋಗ : ವನಶ್ರೀ ಟೀಕೆ…

204
firstsuddi

ಕೊಟ್ಟಿಗೆಹಾರ : ಸಚಿವರಾದ ಮಾದುಸ್ವಾಮಿಯವರು ಕರ್ನಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷರಾದ ನಳಿನಿಯವರನ್ನು ನಿಂದಿಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಮಹಿಳಾ ಉಪಾದ್ಯಕ್ಷರಾದ ವನಶ್ರೀ ಲಕ್ಷ್ಮಣಗೌಡ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ 19 ಹಿನ್ನಲೆಯಲ್ಲಿ ಕೂಡ ರೈತ ಮಹಿಳೆಯರು ತಮ್ಮ ಹೋರಾಟವನ್ನು ಮರೆತ್ತಿಲ್ಲ ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ. ಆದರೆ ಸಚಿವರು ರೈತ ಮಹಿಳೆಯನ್ನು ನಿಂದಿಸಿರುವುದು ಸರಿಯಲ್ಲ. ಇನ್ನು ಮುಂದೆ ಯಾವುದೇ ಸಂಪುಟ ಸದಸ್ಯರಿಂದ ಇಂತಹ ಘಟನೆ ಮರು ಕಳಿಸಬಾರದು ಎಂದರು. ಜಿಲ್ಲಾ ಅಧ್ಯಕ್ಷರಾದ ಹಾಲಮ್ಮ, ಹಾಗೂ ತಾಲ್ಲೂಕು ಅಧ್ಯಕ್ಷರಾದ ಪ್ರಜ್ವಲ್ ಇದ್ದರು.