ವಸಂತನಗರದ ವಿಶೇಷ ಕೋರ್ಟ್ ಹಾಲ್ ನಲ್ಲಿ ‘ಸಿಡಿ ಲೇಡಿ’ ಹಾಜರು..!

130
Firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಯುವತಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾಳೆ. ಕೋವಿಡ್ ಹಿನ್ನೆಲೆ ವಸಂತನಗರದ ಗುರುನಾನಕ್ ಭವನದಲ್ಲಿ ವಿಶೇಷ ಕೋರ್ಟ್ ನಿರ್ಮಾಣವಾಗಿತ್ತು. ಇದೀಗ ಈ ಸ್ಥಳದಲ್ಲೇ ಯುವತಿಯ ಹೇಳಿಕೆಯನ್ನು ನ್ಯಾಯಾಧೀಶರು ಪಡೆದುಕೊಳ್ಳುತ್ತಿದ್ದಾರೆ. ನ್ಯಾಯಾಧೀಶರ ಜೊತೆ ಮಹಿಳಾ ಟೈಪಿಸ್ಟ್ ಮತ್ತು ಯುವತಿ ಮಾತ್ರ ಉಪಸ್ಥಿತರಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 164ರಡಿ ಯುವತಿಯ ಹೇಳಿಕೆಯನ್ನು ಪಡೆಯಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹೇಳಿಕೆ ಪ್ರಕ್ರಿಯೆ ಮುಗಿದ ನಂತರ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಈ ಮೊದಲು ಯುವತಿ ಪರ ವಕೀಲ ಜಗದೀಶ್ ಅವರು, ಅರ್ಧಗಂಟೆ ಮುನ್ನವೇ ಯುವತಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರುಪಡಿಸಿದ್ದೇವೆ ಎಂದು ಹೇಳಲಾಗಿತ್ತು.