ವಿಘ್ನೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರಾ – ಮದುವೆ ಫೋಟೋ ರಿವೀಲ್.

61
firstsuddi

ಚೆನ್ನೈನ ಮಹಾಬಲಿಪುರಂನ ರೆಸಾರ್ಟ್‌ವೊಂದರಲ್ಲಿ ಇಂದು ಬಹುಭಾಷಾ ನಟಿ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಸಪ್ತಪದಿ ತುಳಿದಿದ್ದು, ಇದೀಗ ಮದುವೆಯ ಫೋಟೋ ರಿವೀಲ್ ಆಗಿದೆ. ಸ್ವತಃ ವಿಘ್ನೇಶ್ ಅವರೇ ತಮ್ಮ ಮದುವೆ ಫೋಟೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಈ ಮದುವೆ ಸಮಾರಂಭಕ್ಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಸೂಪರ್ ಸ್ಟಾರ್ ರಜನಿಕಾಂತ್, ಬೋನಿ ಕಪೂರ್, ಖ್ಯಾತ ನಿರ್ದೇಶಕ ಮಣಿರತ್ನಂ ಸೇರಿದಂತೆ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ಹಾಕಿಕೊಂಡಿರುವ ಶಿವನ್, ದೇವರ ಕೃಪೆ ಗುರು ಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.