ವಿವಾದಾತ್ಮಕ ಕಾಳಿ ಮಾತೆ ಪೋಸ್ಟರ್ ; ಲೀನಾ ಮಣಿಮೇಕಲೈ ಟ್ವೀಟ್‌ಗೆ ತಡೆ…

53
firstsuddi

ತಮಿಳಿನ ಖ್ಯಾತ ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ತಮ್ಮ ಹೊಸ ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವಿಯ ವೇಷ ಧರಿಸಿದ ಮಹಿಳೆಯೊಬ್ಬರು ಸಿಗರೇಟ್ ಸೇದುತ್ತಿರುವಂತೆ ತೋರಿಸಿದ್ದರು. ಇವರ ಪೋಸ್ಟರ್ ದೇಶಾದ್ಯಂತ ವಿವಾದ ಹುಟ್ಟುಹಾಕಿತ್ತು. ಇದೀಗ ಭಾರತದಲ್ಲಿ ಅವರ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ.

ಕಾಳಿ ಪೋಸ್ಟರ್ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಇದೆ. ಹಾಗಾಗಿ ‘ಮಾಹಿತಿ ತಂತ್ರಜ್ಞಾನ ಕಾಯ್ದೆ 2000’ರ ಅನ್ವಯ ಈ ಪೋಸ್ಟ್ ಅನ್ನು ತಡೆ ಹಿಡಿಯುವಂತೆ ಟ್ವಿಟರ್ ಸಂಸ್ಥೆಗೆ ಸರ್ಕಾರ ಸೂಚಿಸಿತ್ತು. ಆದ್ದರಿಂದ ಟ್ವಿಟರ್ ಈ ತೀರ್ಮಾನ ತೆಗೆದುಕೊಂಡಿದೆ.

ಜುಲೈ 4ರಂದು ಲಖನೌದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳದಲ್ಲಿ ಅಪರಾಧ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ನೋವು ಮತ್ತು ಚಲನಚಿತ್ರ ನಿರ್ಮಾಪಕರ ವಿರುದ್ಧ ಶಾಂತಿ ಕದಡುವ ಉದ್ದೇಶ ಸೇರಿದಂತೆ ವಿವಿಧ ಆರೋಪಗಳಡಿ ಲೀನಾ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇದೀಗ ದೇಶದ ಹಲವು ಕಡೆ ಫಿಲ್ಮ್ ಚೇಂಬರ್ ಗೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಆ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡದಂತೆ ಒತ್ತಡ ಹೇರಲಾಗುತ್ತಿದೆ.