ವಿಶ್ವನಾಥ್ ಅವರು ನನ್ನ ಮೇಲೆ ಮಾಡಿರುವ ವೈಯಕ್ತಿಕ ಆರೋಪ ಸಾಬೀತಾದರೆ ನಾನು ಕ್ಷಮೆಯಾಚಿಸುತ್ತೇನೆ : ಸಾ.ರಾ ಮಹೇಶ್.

228
firstsuddi

ಮೈಸೂರು : ನಾನು ಯಾವುದೇ ಆಣೆ ಪ್ರಮಾಣ ಮಾಡಲು ಬಂದಿಲ್ಲ, ನನ್ನನ್ನು ಕೊಂಡುಕೊಂಡವರನ್ನು ಭೇಟಿಯಾಗಲು ಬಂದಿದ್ದೇನೆ ಎಂಬ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಮಾಜಿ ಸಚಿವ ಸಾ.ರಾ ಮಹೇಶ್ ಅವರು, ವಿಶ್ವನಾಥ್ ಅವರು ನನ್ನ ಮೇಲೆ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಆರೋಪ ಸಾಬೀತಾದರೆ ನಾನು ಕ್ಷಮೆಯಾಚಿಸುತ್ತೇನೆ. ನಾನು ಯಾರನ್ನೂ ಕರೆದುಕೊಂಡು ಬರುತ್ತೇನೆ ಎಂದು ಹೇಳಿಲ್ಲ. ವಿಶ್ವನಾಥ್ ಅವರು ನನ್ನ ಎದುರು ಪ್ರಮಾಣ ಮಾಡಬೇಕು ಎಂದೇನು ಇರಲಿಲ್ಲ. ದೇವಿ ಸನ್ನಿಧಿಯಲ್ಲಿ ಮಾಧ್ಯಮದವರ ಎದುರು ಹೇಳಬಹುದಿತ್ತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಣ ಪಡೆದಿಲ್ಲ ಎಂದು ಹೇಳಿದ್ದರೆ ಸಾಕಿತ್ತು. ಆದರೆ ಸುಮ್ಮನೆ ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಭೇಟಿಯಾಗಲು ಇಲ್ಲಿಗೆ ಬರಬೇಕಿತ್ತಾ ಯಾವುದಾದರೂ ಹೋಟೆಲ್‍ನಲ್ಲಿ ಭೇಟಿಯಾಗಬಹುದಿತ್ತು ಎಂದರು.